ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆ ಭರ್ತಿ ಸಂಬಂಧ ಮೋದಿ ಜೊತೆ ಎಚ್ ಡಿಡಿ ಮಾತುಕತೆ

06 Feb 2018 6:34 PM | Politics
471 Report

ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಹೈಕೋರ್ಟ್ ಮುಂಭಾಗದ ಗೋಲ್ಡನ್ ಜ್ಯುಬಿಲಿ ದ್ವಾರದಲ್ಲಿ ವಕೀಲರ ಸಂಘ ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಅವರು ಭೇಟಿ ನೀಡಿ ವಕೀಲರೊಂದಿಗೆ ಮಾತುಕತೆ ನಡೆಸಿದರು.

ಪಿಎಂ ಅನುಮತಿ ನೀಡದೆ ನಾನು‌ ದೆಹಲಿಗೆ ಹೋಗಲ್ಲ, ಅನುಮತಿ ಇಲ್ಲದೆಯೇ ಹಾಗೆಯೇ ಹೋಗಿ ನಾನು ಕಾಯಲ್ಲ. ನಾನು ಪ್ರಧಾನಿ ಬಗ್ಗೆ ಲಘುವಾಗಿ ಎಂದೂ ಮಾತಾಡಿಲ್ಲ, ಆ ಸ್ಥಾನಕ್ಕೆ ಗೌರವ ಕೊಟ್ಟಿದ್ದೇನೆ. ಈಗಲೂ ಪ್ರಧಾನಿಯವರನ್ನು ಭೇಟಿಯಾಗಿ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ, ನನ್ನ ಮಾತಿಗೆ ಕಿವಿಗೊಟ್ಟರೆ ಸಂತೋಷ ಎಂದರು. ರಾಷ್ಟ್ರಪತಿಗಳು ಬೆಂಗಳೂರಿಗೆ ಬರುತ್ತಿದ್ದಾರೆ. ನಾನು ಕೂಡ ರಾಷ್ಟ್ರಪತಿಗಳಿಗೆ ಮನವಿ ಪತ್ರ ನೀಡಲಿದ್ದೇನೆ. ರಾಷ್ಟ್ರಪತಿಗಳೊಂದಿಗೆ ಉತ್ತಮ ಬಾಂಧವ್ಯ ಇದೆ. ನೀವು ಒಂದು ಮನವಿ ಪತ್ರ ಕೊಡಿ, ಸಮಸ್ಯೆ ಪರಿಹಾರಕ್ಕೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತೇನೆ.

ಇದರಲ್ಲಿ ನಾನು ರಾಜಕೀಯ ಲಾಭವನ್ನು ನೋಡುವುದಿಲ್ಲ, ಯಾರು ಬೇಕಾದರೂ ಲಾಭ ತೆಗೆದುಕೊಳ್ಳಲಿ. ನಾನು ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸುತ್ತೇನೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು. ಈಗ ನ್ಯಾಯಮೂರ್ತಿಗಳ ಕೊರತೆಯಿಂದ ಸಮಸ್ಯೆ ತೀವ್ರವಾಗಿದೆ. ಜನಸಾಮಾನ್ಯರಿಗೆ ಹಿಂಸೆಯಾಗಿದೆ, ಹೈಕೋರ್ಟ್‌ನ ಹಿರಿಯ ಮತ್ತು ಕಿರಿಯ ವಕೀಲರು ಒಟ್ಟಾಗಿ ಎಲ್ಲರೂ ಧರಣಿಯಲ್ಲಿ ಭಾಗಿಯಾಗಿರುವುದು ಇದೇ ಮೊದಲು. ನಿವೃತ್ತ ನ್ಯಾಯಮೂರ್ತಿಗಳು ಕೂಡ ಭಾಗಿಯಾಗಿರುವುದು ಪರಿಸ್ಥಿತಿಯ ಗಂಭೀರತೆ ತೋರಿಸಿದೆ ಎಂದರು.

Edited By

Shruthi G

Reported By

Madhu shree

Comments