ಆನೇಕಲ್‌ ಪಟ್ಟಣದಲ್ಲಿ ಆಯೋಜಿಸಿದ್ದ 'ಮನೆ ಮನೆಗೆ ಕುಮಾರಣ್ಣ' ಕಾರ್ಯಕ್ರಮದಲ್ಲಿ ಎಚ್‌ಡಿಕೆ ಹೇಳಿದ್ದೇನು?

05 Feb 2018 9:43 AM | Politics
1977 Report

ರಾಜ್ಯದಲ್ಲಿ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಬೆಂಗಳೂರು ಹೊರವಲಯದ ಆನೇಕಲ್‌ ಪಟ್ಟಣದ ಎ.ಎಸ್.ಬಿ ಕ್ರೀಡಾಂಗಣದಲ್ಲಿ ಜೆಡಿಎಸ್‌ ಆಯೋಜಿಸಿದ್ದ 'ಮನೆ ಮನೆಗೆ ಕುಮಾರಣ್ಣ' ಕಾರ್ಯಕ್ರಮ ಹಾಗೂ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,ಬಿಎಸ್ಪಿ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಆ ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಚರ್ಚೆ ನಡೆಸಲಾಗಿದೆ. ಇನ್ನು ಎರಡು ಮೂರು ದಿನದಲ್ಲಿ ಮೈತ್ರಿಯ ಬಗ್ಗೆ ಎರಡೂ ಪಕ್ಷಗಳು ಅಧಿಕೃತವಾಗಿ ಘೋಷಿಸಲಿವೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಬರುತ್ತಾರೆಂದು ಬೆಂಗಳೂರಿನ ರಸ್ತೆಗಳಲ್ಲಿ ಸಿದ್ದರಾಮಯ್ಯ ನಂ-1 ರಾಜ್ಯವೆಂದು ಬೋರ್ಡ್ ಹಾಕಿಸಿದ್ದಾರೆ. ಆದರೆ ರಾಜ್ಯ ಭ್ರಷ್ಟಾಚಾರದಲ್ಲಿ ನಂ-1 ರಾಜ್ಯ ಆಗಿದೆ. ಅಲ್ಲದೆ ಬೆಂಗಳೂರಿನ ರಸ್ತೆಯಲ್ಲಿ ಮೋದಿ ಬರುವುದೇ ಇಲ್ಲ, ಆದರೂ ಜನರ ಹಣವನ್ನು ಜಾಹಿರಾತಿಗೆ ಬಳಸಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ನಾನು ಮುಖ್ಯಮಂತ್ರಿ ಆಗಬೇಕೆನ್ನುವ  ವೈಯಕ್ತಿಕ ಆಸೆ ಈಡೇರಿಸಿಕೊಳ್ಳಲು ಸಿಎಂ ಮಾಡಿ ಎನ್ನುತ್ತಿಲ್ಲ. ನಾಡಿನ ಜನರ ಸಮಸ್ಯೆ ಸರಿಪಡಿಸಲು ಸಂಚಾರ ಮಾಡುತ್ತಿದ್ದೇನೆ. ಕೆಲವು ಘಟನೆಗಳಿಂದ ಹಿಂದೆ ಮುಖ್ಯಮಂತ್ರಿಯಾಗಿದ್ದೆ. ಆಗ ಅಪ್ಪ ನನಗೆ ಬೈದಿದ್ದರು. ಆದರೆ 20 ತಿಂಗಳ ಆಡಳಿತದಲ್ಲಿ ಉತ್ತಮ ಆಡಳಿತ ನೀಡಿದ್ದೆ ಎಂದರು.

ಮಾಧ್ಯಮಗಳು ರೈತ ಸತ್ತರೆ ಅವರನ್ನು ಎಲ್ಲೋ ಒಂದು ಮೂಲೆಯಲ್ಲಿ ಪ್ರಕಟಿಸುತ್ತಾರೆ. ಅದೇ ಮಾಧ್ಯಮಗಳು ಇಂದು ಮೋದಿಯವರನ್ನು ವಿಜೃಂಭಿಸುತ್ತಿವೆ. ಗುಜರಾತಿನ ಮಣ್ಣಿನ ಮಗನಿಗೆ ನೀವು ಬಿಂಬಿಸುತ್ತಿದ್ದೀರಾ, ಅದೇ ನಮಗೆ ಬೇಕಾದ ನೀರಿನ ಸಮಸ್ಯೆಯ ಬಗ್ಗೆ ಕೇಳಲು ಹೋಗುತ್ತಿಲ್ಲ. ಮೂರು ವರ್ಷಗಳಿಂದ ಸುಮ್ಮನಿದ್ದೀರಾ ಎಂದು ಮಾದ್ಯಮಗಳ ವಿರುದ್ಧ ಕುಮಾರಸ್ವಾಮಿ ಮತ್ತೊಮ್ಮೆ ಹರಿಹಾಯ್ದರು.ಗರ್ಬಿಣಿ ಸ್ತ್ರೀಯರಿಗೆ 6ರಿಂದ 12 ತಿಂಗಳವರೆಗೆ 6 ಸಾವಿರ ರೂ.ಗಳನ್ನು ನೀಡುವ ಯೋಜನೆ ಅನುಷ್ಠಾನಕ್ಕೆ ಬರಬೇಕು. 5ಸಾವಿರ ರೂ. ಹಿರಿಯ ನಾಗರಿಕರಿಗೆ ಮಾಶಾಸನ ನೀಡುತ್ತೇನೆ. ಎಲ್ಲರಿಗೂ ಒಂದು ಜನ್ಮ ಆದರೆ ನನಗೆ ಎರಡನೇ ಜನ್ಮ ನೀವು ಕೊಟ್ಟಿದ್ದೀರಾ, 113ಸ್ಥಾನದ ಗುರಿ ತಲುಪಬೇಕು ಎಂದಿದ್ದೇನೆ. ಅದನ್ನು ಮಾಡಲು ನನಗೆ ಒಮ್ಮೆ ಅವಕಾಶ ಕೊಡಿ ಎಂದು ಹೆಚ್‌ಡಿಕೆ ಮನವಿ ಮಾಡಿದರು.ನಮ್ಮಪ್ಪನಾಣೆಗೂ ಸಿದ್ದರಾಮಯ್ಯನಿಗೆ ಮೆಜಾರಿಟಿಗೆ ಬರಲ್ಲ. ಮತ್ತೆ ಅವರು ಕೆಲ ಶಾಸಕರ ಜೊತೆ ಮೋದಿ ಬಳಿಗೆ ಹೋಗಲ್ಲವೆಂದು ಹೇಳುವುದು ಅಸಾಧ್ಯ. ನನಗೆ ಅಧಿಕಾರ ಕೊಡಿ ಮಹದಾಯಿಗೆ ಭಿಕ್ಷೆ ಬೇಡುವುದು ಬೇಡ, ನಾನೇ ಮಾಡಿ ತೋರಿಸುತ್ತೇನೆ ಎಂದು ಕುಮಾರಸ್ವಾಮಿ ಸಿಎಂ ಗೆ ವಿರುದ್ಧ ಟೀಕಿಸಿದರು.

Edited By

Shruthi G

Reported By

Shruthi G

Comments