ಸಿಎಂ ಸಿದ್ದರಾಮಯ್ಯ ಮಂಡಿಸುವ ಬಜೆಟ್‌ ಬಗ್ಗೆ ಎಚ್ ಡಿಕೆ ಹೇಳಿದ್ದೇನು?

04 Feb 2018 6:02 PM | Politics
466 Report

ಸಿಎಂ ಈ ಬಾರಿ ಮಂಡಿಸುವ ರಾಜ್ಯ ಬಜೆಟ್‌ಗೆ ಯಾವುದೇ ಕಿಮ್ಮತ್ತು ಇಲ್ಲ, ಅದು ಕಾರ್ಯರೂಪಕ್ಕೆ ಬರಲ್ಲ, ಸಿದ್ದರಾಮಯ್ಯ ಮಂಡಿಸುವ ಬಜೆಟ್ ಈ ಬಾರಿಯ ಪಕ್ಷದ ಪ್ರಣಾಳಿಕೆ ಎಂದು ಹೇಳಿಕೊಳ್ಳುವ ಬಜೆಟ್ ಆಗಿರುತ್ತೆ ಅಷ್ಟೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ ಮಾಡಿದರು.ಕೋಲಾರದ ಬಂಗಾರಪೇಟೆ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿರುವ ಚೈತನ್ಯ ಯಾತ್ರೆಯಲ್ಲಿ ಭಾಗವಹಿಸುವ ಮುನ್ನ ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಷ್ಟೆ ಕುತಂತ್ರ ಮಾಡಿದರು ಜೆಡಿಎಸ್ ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. 

ಪಕ್ಷದಲ್ಲಿ ಎಲ್ಲಾ ಸ್ಥಾನಗಳನ್ನು ಅನುಭವಿಸಿ ಪಕ್ಷ ತೊರೆಯುವರಿಗೆ ಏನು ಹೇಳಬೇಕು, ಹೆಚ್.ಡಿ.ಕೋಟೆಯಲ್ಲಿ ಚಿಕ್ಕಮಾದು ಅವರನ್ನ ಆರ್ಥಿಕವಾಗಿ ಬಲಗೊಳಿಸಿದ್ದು ಜೆಡಿಎಸ್ ಎಂದ ಕುಮಾರಸ್ವಾಮಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮೈಸೂರಿನ ಅನಿಲ್ ಚಿಕ್ಕಮಾದು ವಿರುದ್ಧ ಕಿಡಿಕಾರಿದ್ರು. ಪಕ್ಷದಿಂದ ಪಕ್ಷಗಳಿಗೆ ಹೋಗುವವರನ್ನು ಯಾರು ತಡೆಯಕ್ಕೆ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇನ್ನೂ ಸಿಎಂ ಎಷ್ಟೇ ಕುತ್ರಂತ ಮಾಡಿದರೂ ಜೆಡಿಎಸ್ ನಿಶಕ್ತಿ ಆಗಲ್ಲ, ಸಿಎಂ ಇರೋದೆ ಜೆಡಿಎಸ್ ವೀಕ್ ಮಾಡಲು. ಆದ್ರೆ ಅದ್ಯಾವುದು ನಡೆಯಲ್ಲ, ಜೆಡಿಎಸ್ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದ ಅವರು, ಇಷ್ಟು ದಿನ  ಅಲ್ಪಸಂಖ್ಯಾತರ ಮೇಲೆ ಇಲ್ಲ ಸಲ್ಲದ ಪ್ರಕರಣಗಳನ್ನ ದಾಖಲಿಸಿ ಸದ್ಯ ಒಲೈಕೆ ಮಾಡುತ್ತಿರುವ ಸಿಎಂಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ಸಿಗಲಿದೆ ಎಂದರು. 

Edited By

Shruthi G

Reported By

Shruthi G

Comments