ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಚಿವ ಹೆಚ್.ವಿಶ್ವನಾಥ್

04 Feb 2018 9:09 AM | Politics
443 Report

ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರಿಗೆ ಯಾವುದೇ ಕಾನೂನು ಗೊತ್ತಿಲ್ಲದ್ದ ಕಾರಣ ಬಜೆಟ್ ಮಂಡಿಸಲು ಯಾವುದೇ ಹಕ್ಕಿಲ್ಲ, ಆದರೂ ಮಂಡಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

 ನನ್ನ ನಂತರ ಜಲಪ್ರಳಯವಾಗಲಿ ಮತ್ತು ನನ್ನ ನಂತರ ಯಾರಿಗೂ ಏನೂ ಇರಬಾರದು ಅನ್ನೋ ಸಿಎಂ ಮನಃಸ್ಥಿತಿ ಎಂತಹ ಕಲ್ಲು ಹೃದಯಿಗಳಿಗೂ ಇರುವುದಿಲ್ಲ. ಅಲ್ಪಸಂಖ್ಯಾತರ ಮುಂದೆ ಸಿಎಂ ಬರೀ ಬುಡುಬುಡಿಕೆ ಅಲ್ಲಾಡಿಸುತ್ತಿದ್ದಾರೆ ಅಷ್ಟೇ, ಮುಸ್ಲಿಂ ಗುರುಗಳನ್ನು ರಾತ್ರೋರಾತ್ರಿ ಭೇಟಿ ಮಾಡುವ ಅಗತ್ಯವೇನಿತ್ತು. ಹಗಲು ಹೊತ್ತು ಮುಸ್ಲಿಂ ಮುಖಂಡರನ್ನು ಭೇಟಿ ಮಾಡಬಾರದಾ ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.


Edited By

Shruthi G

Reported By

Shruthi G

Comments