ಕೇಂದ್ರದ 'ಅನ್ನಭಾಗ್ಯ'ವನ್ನು ತನ್ನಭಾಗ್ಯವೆಂದು ಸಿದ್ದರಾಮಯ್ಯ: ಬಿಎಸ್ ವೈ ಕಿಡಿ

03 Feb 2018 1:45 PM | Politics
289 Report

ಹರಪನಹಳ್ಳಿ ಪಟ್ಟಣದ ಎಚ್‍ಪಿಎಸ್ ಕಾಲೇಜು ಆವರಣದಲ್ಲಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆರ್‍ಎಸ್‍ಎಸ್, ಬಜರಂಗದಳದ ಕಾರ್ಯಕರ್ತರಿಗೆ ಕೊಲೆ ಭಾಗ್ಯ ನೀಡಿದ ಸರ್ಕಾರ ಇದು. ಇಂತಹ ಬೇಜವಾಬ್ದಾರಿ ಮುಖ್ಯಮಂತ್ರಿಗಳ ನಡೆಯನ್ನು ರಾಜ್ಯದ ಜನತೆ ಇನ್ನೂ ಮೂರು ತಿಂಗಳು ಸಹಿಸಿಕೊಳ್ಳದೆ ವಿಧಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಸಿರು ಶಾಲು ಹೊದ್ದುಕೊಳ್ಳುವುದು ಬೇಡ ಎಂದು ನನಗೆ ಹೇಳುವ ಮುಖ್ಯಮಂತ್ರಿಯವರ ಧೋರಣೆ ರೈತ ವಿರೋಧಿತನವನ್ನು ಬಿಂಬಿಸುತ್ತದೆ ಎಂದು ಕಿಡಿಕಾರಿದರು. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಾನು ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಹಾಗೂ ರೈತರ ಸಹಕಾರಿ ಬ್ಯಾಂಕ್‍ಗಳ ಸಾಲವನ್ನು ಮನ್ನಾ ಮಾಡಿದ್ದೇನೆ. ಕೃಷಿ ಬಜೆಟ್ ಮಂಡಿಸಿದ್ದೇನೆ. ರೈತರ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ನನಗೆ ಹಸಿರು ಶಾಲು ಹೊದ್ದುಕೊಳ್ಳಬೇಡಿ ಎನ್ನಲು ಇವರ್ಯಾರು ಎಂದು ಪ್ರಶ್ನಿಸಿದರು. ರಾಜ್ಯದ 224 ಕ್ಷೇತ್ರಗಳಲ್ಲಿ ಯಾತ್ರೆ ಕೈಗೊಂಡು 11 ಸಾವಿರ ಕಿಮೀಗೂ ಹೆಚ್ಚು ದೂರವನ್ನು ಕ್ರಮಿಸಿ 1.84 ಕೋಟಿ ಜನರ ಮುಂದೆ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ್ದೇನೆ. ಯಾತ್ರೆಗೆ ಉತ್ತಮ ಪ್ರತಿಕ್ರಿಯೆಯೂ ದೊರೆತಿದ್ದು, ಬಿಜೆಪಿ ಪಕ್ಷವು ಮುಂದಿನ ಚುನಾವಣೆಯಲ್ಲಿ ಬಹುಮತ ಗಳಿಸಿ ರಾಜ್ಯದ ಚುಕ್ಕಾಣಿ ಹಿಡಿಯಲಿದೆ. ಇದರಲ್ಲಿ ಸಂದೇಹವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಸದ ಜಿ.ಎನ್.ಸಿದ್ದೇಶ್ವರ್, ಮಾಜಿ ಸಂಸದ ಶ್ರೀರಾಮುಲು, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಎಸ್.ಎ.ರವೀಂದ್ರನಾಥ್, ಚಲನಚಿತ್ರ ನಟ ಕೆ.ಶಿವರಾಂ, ಮುಖಂಡ ಜಯಪ್ರಕಾಶ್ ಕೊಂಡಜ್ಜಿ, ವಿಧಾನ ಪರಿಷತ್ ಮಾಜಿ ಸಚೇತಕ ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಬಸವರಾಜ್ ನಾಯಕ್, ಜಿಪಂ ಅಧ್ಯಕ್ಷೆ ಮಂಜುಳಾರಾಜು ಮತ್ತಿತರರಿದ್ದರು.

 

Edited By

Shruthi G

Reported By

Madhu shree

Comments