ಆಫ್ರಿಕಾವನ್ನು 6 ವಿಕೆಟ್ ಗಳಿಂದ ಬಗ್ಗುಬಡಿದ ಭಾರತ ತಂಡ

02 Feb 2018 10:04 AM | Politics
329 Report

ಡರ್ಬನ್​ನಲ್ಲಿ ನಡೆದ 6 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 6 ವಿಕೆಟ್​ಗಳಿಂದ ಬಗ್ಗುಬಡಿದ ಭಾರತ ತಂಡ ಕಿಂಗ್ಸ್ ಮೇಡ್ ಮೈದಾನದಲ್ಲಿ ಆತಿಥೇಯ ತಂಡದ ವಿರುದ್ಧ ಮೊಟ್ಟಮೊದಲ ಗೆಲುವು ದಾಖಲಿಸಿತು. ದಕ್ಷಿಣ ಆಫ್ರಿಕಾ ವಿರುದ್ಧ ಈ ಮೈದಾನದಲ್ಲಿ ಆಡಿದ ಹಿಂದಿನ ಏಳು ಪಂದ್ಯಗಳ ಪೈಕಿ 6ರಲ್ಲಿ ಸೋಲು ದಾಖಲಾಗಿದ್ದರೆ, ಇನ್ನೊಂದು ಪಂದ್ಯ ರದ್ದಾಗಿತ್ತು.

ಪಂದ್ಯ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿ ಕೊಂಡಿತು. ಕುಲ ದೀಪ್ ಯಾದವ್ (34ಕ್ಕೆ 3) ಹಾಗೂ ಯಜುವೇಂದ್ರ ಚಾಹಲ್​ರ (45ಕ್ಕೆ 2) ಸ್ಪಿನ್ ದಾಳಿಗೆ ಆರಂಭದಲ್ಲಿ ಆತಂಕಕ್ಕೆ ಈಡಾಗಿದ್ದ ಆತಿಥೇಯ ತಂಡ, ನಾಯಕ ಫಾಫ್ ಡು ಪ್ಲೆಸಿಸ್ (120ರನ್, 112 ಎಸೆತ, 11 ಬೌಂಡರಿ, 2 ಸಿಕ್ಸರ್) ಬಾರಿಸಿದ ಶತಕದ ಬಲದಿಂದ 8 ವಿಕೆಟ್​ಗೆ 269 ರನ್ ಬಾರಿಸಿತು. ಇದಕ್ಕೂತ್ತರವಾಗಿ ಚೆಸಿಂಗ ಮಾಸ್ಟರ್ ನಾಯಕ ವಿರಾಟ್ ಕೊಹ್ಲಿ (112 ರನ್, 119 ಎಸೆತ, 10 ಬೌಂಡರಿ) ಹಾಗೂ ಅಜಿಂಕ್ಯ ರಹಾನೆ (79 ರನ್, 86 ಎಸೆತ, 5 ಬೌಂಡರಿ, 2 ಸಿಕ್ಸರ್) ಮೂಲಕ ಯಶಸ್ವಿ ಚೇಸಿಂಗ್ ಮಾಡಿದ ಭಾರತ 45.3 ಓವರ್​ಗಳಲ್ಲಿ 4 ವಿಕೆಟ್​ಗೆ 270 ರನ್ ಬಾರಿಸಿ ಗೆಲುವು ಕಂಡಿತು. ಆ ಮೂಲಕ ಸರಣಿಯಲ್ಲಿ 1-0 ಮುನ್ನಡೆಗೇರಿದ ಭಾರತ, ದಕ್ಷಿಣ ಆಫ್ರಿಕಾದ ಸತತ 17 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು.

 

Edited By

Shruthi G

Reported By

Madhu shree

Comments