ರಾಜಕೀಯ ಕಣಕ್ಕಿಳಿಯಲು, ಚಾಲೆಂಜಿಂಗ್ ಸ್ಟಾರ್ ಕರೆಸಿ ಕಾರ್ಯಕ್ರಮ

01 Feb 2018 4:27 PM | Politics
523 Report

ಹೌದು.., ಟಿಕೆಟು ಪಡೆಯುವ ಕಸರತ್ತಿಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಮತ್ತಿತರ ಕಲಾವಿದರನ್ನು ಕರೆಯಿಸಿ, ಜನರನ್ನು ಸೇರಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾದವರು ಬಿಜೆಪಿ ಮುಖಂಡ ಎಸ್ಆರ್ಎನ್ಇ ಫೌಂಡೇಶನ್ ಸಂಸ್ಥಾಪಕ ನವಲಿ ಹಿರೇಮಠ್. ಈ ಕಾರ್ಯಕ್ರಮದ ಮೂಲಕ ಪ್ರಮುಖ ಪಕ್ಷಗಳಿಗೆ ಮತ್ತು ತಮ್ಮ ರಾಜಕೀಯ ವಿರೋಧಿಗಳಿಗೆ ತೀರುಗೇಟು ನೀಡಿದ್ದಾರೆ ನವಲಿ.

 ಚಿತ್ರನಟ ದರ್ಶನ್, ಖ್ಯಾತ ಹಿನ್ನೆಲೆ ಗಾಯಕ ವಿಜಯ್‌ ಪ್ರಕಾಶ್‌ ಮತ್ತು ನಿರೂಪಕಿ ಅನುಶ್ರೀ ಅವರನ್ನು ಕರೆಯಿಸಿದ್ದ ನವಲಿ, ಮನರಂಜನೆ ಕಾರ್ಯಕ್ರಮದ ಹೆಸರಿನಲ್ಲಿ ಜನಸ್ತೋಮ ಸೇರಿಸಿದ್ದರು. ಈ ರಾಜಕೀಯ ಜಿದ್ದಾಜಿದ್ದಿನ ಅಖಾಡಕ್ಕೆ ಸಜ್ಜಾದರು.  ಹೀಗೆ ವೇದಿಕೆಯ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಬರುತ್ತಿದ್ದಂತೆ, ಅಪಾರ ಪ್ರಮಾಣದಲ್ಲಿ ಸೇರಿದ ಅಭಿಮಾನಿಗಳ ಕೇಕೆ, ಶಿಳ್ಳೆ ಮುಗಿಲು ಮುಟ್ಟಿತ್ತು. ರಾಷ್ಟ್ರೀಯ ಯುವ ಉತ್ಸವದಲ್ಲಿ ವಿಜಯ ಪ್ರಕಾಶ್‌ ಸಂಗೀತ ಕಾರ್ಯಕ್ರಮ ಜೊತೆಗೆ ದರ್ಶನ್ ಭಾಗವಹಿಸಿರುವುದು ಪ್ರಮುಖ ಆಕರ್ಷಣೆಯಾಗಿತ್ತು. ಸಮಾರಂಭಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ದರ್ಶನ್, ಯುವ ಜನತೆ ಒಂದು ಕ್ಷಣವು ಸಮಯ ವ್ಯರ್ಥ ಮಾಡದೇ ಕೆಲಸದಲ್ಲಿ ನಿರತರಾಗಿ, ಕಷ್ಟ ಪಟ್ಟು ಮಾಡಿರುವ ಕೆಲಸವೇ ಮುಂದಿನ ಸಾಧನೆಗೆ ದಾರಿ ಎಂದು ಸಲಹೆ ನೀಡಿದರು. ಬಳಿಕ ಮಾತನಾಡಿದ ಎಸ್ಆರ್‌ಎನ್ ಇ ಫೌಂಡೇಶನ್ ಸಂಸ್ಥಾಪಕ ನವಲಿ ಹಿರೇಮಠ್‌, ಹುನಗುಂದ ಮತ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಇಲ್ಲಿನ ಸಮಸ್ಯೆಗಳು ಹಾಗೂ ಜನರ ಮಿಡಿತ ಇರುವುದರಿಂದ ರಾಜಕೀಯಕ್ಕೆ ಬರುತ್ತಿದ್ದು, ಬಿಜೆಪಿ ಪಕ್ಷದಿಂದ ಟಿಕೆಟ್‌ಗಾಗಿ ಪ್ರಯತ್ನ ಮಾಡುವುದಾಗಿ ಘೋಷಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಪಕ್ಷದ ಮುಖಂಡರಿಗೆ ಹಾಗೂ ಶಾಸಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

Edited By

Shruthi G

Reported By

Madhu shree

Comments