‘ಕೈ’ ಪಕ್ಷ ಬಿಟ್ಟು ‘ತೆನೆ’ ಹೊತ್ತ ಕಾಂಗ್ರೆಸ್ ಮುಖಂಡರು..!!

01 Feb 2018 9:29 AM | Politics
14650 Report

ರಸ್ತೆ ಅಭಿವೃದ್ದಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಈ ಕ್ಷೇತ್ರದ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಗುಂಜೂರು ಶ್ರೀನಿವಾಸರೆಡ್ಡಿ ಆರೋಪಿಸಿದರು.

ಪಟ್ಟಣದ ಅವರ ಗೃಹಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಇತ್ತೀಚಿಗೆ ನಡೆದ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ಈ ಕ್ಷೇತ್ರಕ್ಕೆ 1200 ಕೋಟಿ ರೂ.ಗಳ ಹಣವನ್ನು ಸರ್ಕಾರಿದಂದ ತಂದು ಕ್ಷೇತ್ರದ ಅಭಿವೃದ್ದಿಪಡಿಸಿದ್ದೇನೆ ಎಂಬ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಕ್ಷೇತ್ರವೂ ಯಾವುದೇ ರೀತಿಯಲ್ಲಿ ಅಭಿವೃದ್ದಿಯಾಗಿಲ್ಲ, ಕ್ಷೇತ್ರದಾದ್ಯಂತ ಎಲ್ಲಿ ನೋಡಿದರೂ ಹಳ್ಳ ಹಿಡಿದಿರುವ ರಸ್ತೆಗಳು, ಬಹುತೇಕ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರು ಇಲ್ಲದಿರುವುದು ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳು ಜನರು ಎದುರಿಸುತ್ತಿದ್ದರು ಜನರ ಸಮಸ್ಯೆಗೆ ಯಾವುದೇ ರೀತಿಯ ಸ್ಪಂಧನೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಪರ್ವ ಶುರುವಾಗಿದ್ದು ಇದಕ್ಕೆ ನಿದರ್ಶನವೆಂಬಂತೆ ತಾಲೂಕಿನ ಬಿಳ್ಳೂರು ತಾ.ಪಂ ಉಪಚುನಾವಣೆಯ ಗೆಲವು ವಿಧಾನಸಭಾ ಕ್ಷೇತ್ರದ ಚುನಾವಣೆ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಭವಿಷ್ಯ ನುಡಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕಾರಕ್ಕೆ ಬರಲು ಜನರು ಆರ್ಶಿವಾದ ನೀಡಿದರೆ ಖಂಡಿತವಾಗಿಯೂ ಜನರ ನೀರಿಕ್ಷೆ ಮೀರಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕಸಬಾ ಹೋಬಳಿಯ ದೇವರಗುಡಿಯಪಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಯಮಣ್ಣ - ಕಮ್ಮರವಾರಪಲ್ಲಿ, ಜಿ.ಆರ್.ನರಸಿಂಹಪ್ಪ - ಗುಂಡ್ಲಪಲ್ಲಿ, ಈಶ್ವರಮ್ಮ -ಕೊಂಡಂವಾರಿಪಲ್ಲಿ, ವೆಂಕಟರವಣಪ್ಪ - ಸಡ್ಲವಾರಪಲ್ಲಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಮುಖಂಡ ಗುಂಜೂರು ಆರ್.ಶ್ರೀನಿವಾಸರೆಡ್ಡಿ ನೇತೃತ್ವದಲ್ಲಿ ಬರಮಾಡಿಕೊಂಡರು.ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲು ದಿಕ್ಸೂಚಿ, ಸೇರ್ಪಡೆಗೊಂಡಿರುವವರು ಭಿನ್ನಾಭಿಪ್ರಾಯಗಳಿಲ್ಲದೆ ನಮ್ಮೊಂದಿಗೆ ಸದಾ ಇರಬೇಕು, ಪಕ್ಷದ ಬಲವರ್ಧನೆಗೆ ಸಹಕರಿಸಬೇಕು, ಸದಾ ನಿಮ್ಮೊಂದಿಗೆ ನಾನು ಸಿದ್ದನಿರುತ್ತೇನೆ' ಎಂದು ತಿಳಿಸಿದರು.

Edited By

Shruthi G

Reported By

Shruthi G

Comments