ಪಾವಗಡ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಜೆಡಿಎಸ್ ಅಭ್ಯರ್ಥಿ ಸಜ್ಜು..!!

29 Jan 2018 9:35 AM | Politics
4562 Report

ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿ ತಾಲ್ಲೂಕಾಗಿರುವ ಪಾವಗಡ ಎಂದರೆ ಮೊದಲು ಕಣ್ಣ ಮುಂದೆ ಬರುವುದು ಬರಡು ಭೂಮಿ, ಪ್ಲೊರೈಡ್‍ಯುಕ್ತ ನೀರು, ನಕ್ಸಲ್ ಚಟುವಟಿಕೆ, ನಿರುದ್ಯೋಗದಂತಹ ಸಮಸ್ಯೆಗಳು. ಇಲ್ಲಿ ಹೊಸದಾಗಿ ಸೋಲಾರ್ ಪಾರ್ಕ್ ಸ್ಥಾಪನೆಯಾದ ನಂತರ ತಾಲ್ಲೂಕಿನ ಚಿತ್ರಣವೇ ಬದಲಾಗಿದೆ.

ಬಿಟ್ಟು ಹೋಗಿದ್ದ ಕಾಂಗ್ರೆಸ್‍ಗೆ ಮತ್ತೆ ಮರಳಿದಾದರೂ ಕಾಂಗ್ರೆಸ್ 2013ರಲ್ಲಿ ನೇರವಾಗಿ ವೆಂಕಟರವಣಪ್ಪ ಅವರಿಗೆ ಟಿಕೆಟ್ ನೀಡದೆ, ಅವರ ಪುತ್ರ ಹೆಚ್.ವಿ.ವೆಂಕಟೇಶ್ ಅವರಿಗೆ ಟಿಕೆಟ್ ನೀಡುತ್ತು. 63823 ಮತಗಳನ್ನು ಪಡೆದ ವೆಂಕಟೇಶ್ 4863 ಮತಗಳ ಅಂತರದಲ್ಲಿ ಜೆಡಿಎಸ್ ಅಭ್ಯರ್ಥಿ ತಿಮ್ಮರಾಯಪ್ಪ ವಿರುದ್ಧ ಸೋಲು ಕಂಡರು.

ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಅಪ್ಪ ಮಕ್ಕಳ ನಡುವೆ ಪೈಪೋಟಿ ಏರ್ಪಟ್ಟಿದ್ದರೆ ಇನ್ನೊಂದೆಡೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ ಹಾಗೂ ಕ್ರೇಡಲ್ ನಾಮ ನಿರ್ದೇಶೀತ ನಿರ್ದೇಶಕ ಬಲರಾಮ್ ತಾಲ್ಲೂಕಿಗೆ ಸೋಲಾರ್ ಪಾರ್ಕ್ ಬರಲು ನಾನೇ ಕಾರಣ, ಈ ಬಾರಿ ಕಾಂಗ್ರೆಸ್ ನನಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಇದು ಜೆಡಿಎಸ್ ಗೆ ಪ್ಲಸ್ ಪಾಯಂಟ್ ಆಗಲಿದೆ. ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಜೆಡಿಎಸ್ ತನ್ನದೇ ಆದ ರೀತಿಯಲ್ಲಿ ತಂತ್ರ ರೂಪಿಸುತ್ತಿದೆ.ಜೆಡಿಎಸ್ ಪಕ್ಷದಲ್ಲಿ ತಿಮ್ಮರಾಯಪ್ಪ ಅವರನ್ನು ಹೊರತು ಪಡಿಸಿದರೆ ಇವರಿಗೆ ಪರ್ಯಾಯವಾಗಿ ಬೇರೆ ನಾಯಕರಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ತಿಮ್ಮರಾಯಪ್ಪಎರಡನೇ ಅವಧಿಗೆ ಅಭ್ಯರ್ಥಿಯಾಗುವುದು ಬಹತೇಕ ಖಚಿತವಾಗಿದೆ.

Edited By

Shruthi G

Reported By

Shruthi G

Comments