ರಾಹುಲ್ ಗಾಂಧಿಯವರ ಟೆಂಪಲ್ ರನ್ ವರ್ಕೌಟ್ ಆಗಲ್ಲ : ಚಕ್ರವರ್ತಿ ಸೂಲಿಬೆಲೆ

24 Jan 2018 5:14 PM | Politics
235 Report

ರಾಜ್ಯದ ಸಿಎಂ ಹಿಂದೂಗಳ ಎದೆಗೆ ಇರಿದು ಆಗಿದೆ. ನಿಮ್ಮ ಸಾಫ್ಟ್ ಹಿಂದುತ್ವ ಇಲ್ಲಿ ಫಲ ಕೊಡಲ್ಲ ಅಂತಾ ವಾಗ್ದಾಳಿ ನಡೆಸಿದ ಅವರು, ಧರ್ಮಸ್ಥಳದ ವಿಚಾರ ಹಾಗೂ ಕೃಷ್ಟಮಠಕ್ಕೆ ಭೇಟಿ ಕೊಡದ ವಿಚಾರದಲ್ಲಿ ಮಾತಾನಾಡದ ರಾಹುಲ್ ಈಗ್ಯಾಕೆ ಬರುತ್ತಿದ್ದಾರೆ ಮಂದಿರಕ್ಕೆ ಅನ್ನೋದು ಜನರಿಗೆ ಗೊತ್ತಾಗಿದೆ. ಧರ್ಮಸ್ಥಳದ ವಿಚಾರದಲ್ಲೂ, ಉಡುಪಿಯ ಕೃಷ್ಟ ದೇವಾಸ್ಥಾನದಲ್ಲಿ ಸಿಎಂ ಉದ್ಧಟತನ ತೋರಿದ್ದು ಮರೆತಿಲ್ಲ.

ಕಾಮ್ರೇಡ್‍ಗಳ ಪ್ರಭಾವದಿಂದ ಹಿಂದೂಗಳ ಹೃದಯಕ್ಕೆ ಇರಿದಿದ್ದಾರೆ. ಇಲ್ಲಿ ರಾಹುಲ್ ಟೆಂಪಲ್ ರನ್ ವರ್ಕೌಟ್ ಆಗಲ್ಲ ಅಂತ ಕಟುವಾಗಿ ಟೀಕಿಸಿದ್ದಾರೆ. ಮುಸ್ಲಿಂ ಓಲೈಸುತ್ತಿದ್ದ ಸಿಎಂ ಅವರ ನಡುವೆ ಈಗ ರಾಹುಲ್ ಟೆಂಪಲ್ ರನ್ ಮಾಡಿದ್ದು ಮುಸ್ಲಿಂರನ್ನು ಚಿಂತೇಗಿಡು ಮಾಡಿದೆ. ತ್ರಿವಳಿ ತಲಾಖ್ ನಿಷೇಧ ಮಾಡಿರುವ ಹಾಗೂ ಮುಸ್ಲಿಂ ಮಹಿಳೆಯರ ಅಭಿವೃದ್ಧಿಗೆ ಮೋದಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಇದ್ರಿಂದ ಮುಸ್ಲಿಂರ ಮನೆ ಒಡೆದಿದೆ. ಗಂಡ ಮೋದಿ ವಿರುದ್ಧನಾದ್ರೂ ಮುಸ್ಲಿಂ ಮಹಿಳೆ ಮಾತ್ರ ಮೋದಿ ಜಪ ಮಾಡುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗುವ ಸಾಧ್ಯತೆ ದಟ್ಟವಾಗಿದೆ ಅಂತ ಅವರು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರನ್ನೇ ತುಳಿಯುತ್ತಿದ್ದಾರೆ. ಸಿಎಂ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಪರಮೇಶ್ವರ್‍ನೊಳಗೆ ಬೆಂಕಿ ಚೆಂಡು ಇದೆ. ದಿನೇಶ್ ಗುಂಡುರಾವ್ ಮುಖ್ಯಮಂತ್ರಿಯಾಗಲು ಕಾಯುತ್ತಿದ್ದಾರೆ ಅಂದ್ರು.

Edited By

Shruthi G

Reported By

Madhu shree

Comments

Cancel
Done