ಮಂಡ್ಯದಲ್ಲಿ ಕಾಂಗ್ರೆಸ್ ನ ಪದ್ಮಾವತಿಗೆ ಸೆಡ್ಡು ಹೊಡೆಯಲು ಜೆಡಿಎಸ್ ನಿಂದ ಡಿಂಪಲ್ ಬೆಡಗಿ ಸಜ್ಜು..!!

24 Jan 2018 9:28 AM | Politics
24420 Report

ಮುಂಬರುವ ರಾಜ್ಯ ಚುನಾವಣೆಗೆ ಮಂಡ್ಯ ಕ್ಷೇತ್ರದ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆದಿದೆ. ಕಾಂಗ್ರೆಸ್ ನಿಂದ ನಟಿ ರಮ್ಯಾ, ಅಂಬರೀಷ್ ನಡುವೆ ಪೈಪೋಟಿಯಿದ್ದರೆ, ಅವರ ಜತೆಗೆ ಇದೀಗ ಜೆಡಿಎಸ್ ಗೆ ರಚಿತಾ ರಾಮ್ ಕೂಡಾ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ನಟಿ ರಚಿತಾ ರಾಮ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿರುವ ರಚಿತಾ ಜೆಡಿಎಸ್ ನಿಂದ ಮಂಡ್ಯ ಟಿಕೆಟ್ ಪಡೆಯುತ್ತಾರೆ ಎಂಬ ಸುದ್ದಿ ಬಂದಿದೆ.ಇತ್ತ ಕಾಂಗ್ರೆಸ್ ನಲ್ಲೂ ನಟಿ ರಮ್ಯಾಗೆ ಈ ಬಾರಿ ಮಂಡ್ಯ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಕೇಳಿಬರುತ್ತಿವೆ.  ಕಾಂಗ್ರೆಸ್ ನಿಂದ ನಟಿ ರಮ್ಯಾ, ಅಂಬರೀಷ್ ನಡುವಿನ ಭಾರಿ ಪೈಪೋಟಿ, ಕಾಂಗ್ರೆಸ್ ನಲ್ಲಿ ಒಡಕಿ ಮೂಡುವ ಸಾಧ್ಯತೆಯಿದೆ. ಕಾಂಗ್ರೆಸ್ ನ ಈ ವೀಕ್ನೆಸ್ ಜೆಡಿಎಸ್ ಗೆ ಲಾಭವಾಗಲಿದೆ.  ಒಂದು ವೇಳೆ ಹಾಗಾದರೆ ಈ ಬಾರಿ ಮಂಡ್ಯದಲ್ಲಿ ಬುಲ್ ಬುಲ್ ಹುಡುಗಿ ರಚಿತಾ ಮತ್ತು ಪದ್ಮಾವತಿ ರಮ್ಯಾ ನಡುವೆ ಸ್ಪರ್ಧೆ ನಡೆಯಲಿದೆ. 

 

Edited By

Shruthi G

Reported By

Shruthi G

Comments