ಕುಮಟಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ತೆನೆ ಹೊರಲು ಸಿದ್ದ

23 Jan 2018 6:17 PM | Politics
5261 Report

ಹೊನ್ನಾವರ ವಿಧಾನಸಭಾ ಕ್ಷೇತ್ರದ ರಾಜಕಾರಣದಲ್ಲಿ ಹೊಸ ಸುದ್ದಿ ಸದ್ದು ಮಾಡುತ್ತಿದೆ. ಬಿಜೆಪಿ‌ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದ ನಾಲ್ವರು ನಾಯಕರು ಜೆಡಿಎಸ್ ಸೇರುವ ಬಗ್ಗೆ ಗಾಳಿ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಜೆಡಿಎಸ್‌ನ ಕುಮಟಾ ಕ್ಷೇತ್ರದ ಘೋಷಿತ ಅಭ್ಯರ್ಥಿ ಪ್ರದೀಪ ನಾಯಕ ದೇವರಬಾವಿ ಸುಳಿವು ಕೊಟ್ಟಿದ್ದಾರೆ. 'ನಾಲ್ವರು ಬಿಜೆಪಿಗರು ಜೆಡಿಎಸ್‌ಗೆ ಬರಲಿದ್ದಾರೆ. ಅದರಲ್ಲಿ ಓರ್ವ ಬಲಿಷ್ಠ ಮುಖಂಡರು ಕೂಡಾ ಸೇರಿದ್ದಾರೆ' ಎಂದು ಕೆಲವು ದಿನಗಳ ಹಿಂದೆ ಕಾರ್ಯಕ್ರಮದಲ್ಲಿ ಹೇಳಿಕೆ ಕೊಟ್ಟಿದ್ದರು.

ಕುಮಟಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಜೆಡಿಎಸ್‌ ಪಕ್ಷದಿಂದ ಮಾಜಿ ಶಾಸಕ ದಿನಕರ ಶೆಟ್ಟಿ ಬಿಜೆಪಿಗೆ ಬಂದಿರುವುದು ಪಕ್ಷಕ್ಕೆ ಬಲ ತಂದಿದೆ.ಹಿಂದೂ ಪರ ಸಂಘಟನೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸೂರಜ್ ನಾಯ್ಕ ಸೋನಿ, ಬೆಳಕು ಗ್ರಾಮೀಣಾಭಿವೃದ್ಧಿ ಟೃಸ್ಟ್ ಮೂಲಕ ಸದ್ಯ ಪ್ರಚಾರದಲ್ಲಿರುವ ನಾಗರಾಜ ನಾಯಕ, ಜಿಲ್ಲಾ ಪಂಚಾಯಿತಿ ಸದಸ್ಯೆ ಗಾಯತ್ರಿ ಗೌಡ, ಎಸ್ಆರ್‌ಎಲ್ ಟ್ರಾವೆಲ್ಸ್ ಮಾಲೀಕ ವೆಂಕಟರಮಣ ಹೆಗಡೆ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು. ಈ ನಾಲ್ವರು ಕುಳಿತು ಕೈ ಜೋಡಿಸಿರುವ ಚಿತ್ರ ಸದ್ಯ ಕ್ಷೇತ್ರದಲ್ಲಿ ವೈರಲ್ ಆಗಿದೆ.

Edited By

Shruthi G

Reported By

Madhu shree

Comments