ಗೋವಾ ನಾಯಕರಿಗೆ ಎಚ್ಚರಿಕೆ ನೀಡಿದ ಜೆಡಿಎಸ್‌‌‌ ಶಾಸಕ ಎನ್.ಹೆಚ್.ಕೋನರೆಡ್ಡಿ

16 Jan 2018 5:54 PM | Politics
2375 Report

 ಗೋವಾ ಮುಖ್ಯಮಂತ್ರಿ, ಅಲ್ಲಿನ ನೀರಾವರಿ ಸಚಿವರು ಹಾಗೂ ಗೋವಾದಲ್ಲಿ ಮಹದಾಯಿ ಪರವಾಗಿ ಹೋರಾಟ ಮಾಡುತ್ತಿರುವ ನಾಡಕರ್ಣಿ ಅವರ ಇತ್ತೀಚಿನ ಹೇಳಿಕೆಗಳು ಕನ್ನಡಿಗರನ್ನು ಕೆರಳಿಸಿವೆ. ಇವರಿಗೆ ಸಂವಿಧಾನ ಏನಾದರೂ ಗೊತ್ತಿದ್ದರೆ ಸಂವಿಧಾನಾತ್ಮಕವಾಗಿ ಚರ್ಚೆ ಮಾಡಲಿ. ಕನ್ನಡಿಗರನ್ನು ಕೆರಳಿಸುವ ಹೇಳಿಕೆ ನೀಡಿರುವ ಅವರು ಕೂಡಲೇ ತಮ್ಮ ಹೇಳಿಕೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ನಾವೂ ಗೋವಾಕ್ಕೆ ನೀರು, ಹಾಲು ಪೂರೈಕೆ ಮಾಡುತ್ತೇವೆ. ಇವುಗಳನ್ನು ನಾವೂ ಬಂದ್ ಮಾಡಿದರೆ ಗೋವಾದವರ ಪರಿಸ್ಥಿತಿ ಏನಾಗುತ್ತದೆ? ಕರ್ನಾಟಕ ಮತ್ತು ಗೋವಾ ಸಹೋದರ ರಾಜ್ಯಗಳಂತಿವೆ. ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಸಮಸ್ಯೆಯನ್ನು ಹುಟ್ಟು ಹಾಕಬಾರದು. ಗೋವಾ ಮುಖ್ಯಮಂತ್ರಿಗಳಿಗೆ ಸಂವಿಧಾನದ ಮೇಲೆ ವಿಶ್ವಾಸವಿದ್ದರೆ ಕೂಡಲೇ ನೀರಾವರಿ ಸಚಿವ ಪಾಲೇಕರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದರು. ಇನ್ನು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಮನಗುಂಡಿ ಬಸವಾನಂದ ಸ್ವಾಮೀಜಿ ಸಹ ಗೋವಾ ಸಚಿವರ ವಿರುದ್ಧ ಕಿಡಿ ಕಾರಿದ್ದಾರೆ. ಪ್ಯಾಲೇಕರ್ ಒಬ್ಬ ಸಚಿವರಾಗಿ ಒಂದು ರಾಜ್ಯದ ಜನರನ್ನು ಒಟ್ಟಾರೆಯಾಗಿ ಜರಿಯುತ್ತಾರೆ ಎಂದರೆ ಅವರಿಗೆ ಸಂವಿಧಾನದ ನಿಯಮ ಹಾಗೂ ರಾಜಕಾರಣಿಗೆ ಇರಬೇಕಾದ ಸಾಮಾನ್ಯ ಜ್ಞಾನವೂ ಇಲ್ಲ. ಕೂಡಲೇ ಆ ಮಾತನ್ನು ಅವರು ವಾಪಸ್ ಪಡೆದು ಕನ್ನಡಿಗರ ಕ್ಷಮೆ ಕೇಳಬೇಕೆ ಎಂದು ಒತ್ತಾಯಿಸಿದರು.

ಈ ಸಮಸ್ಯೆಯನ್ನು ಹೈಕಮಾಂಡ್ ಬಗೆಹರಿಸುವಂಥದಲ್ಲ. ರಾಜಕೀಯ ವ್ಯವಸ್ಥೆಯಲ್ಲಿ ಒಂದು ನಿಯಮ ಇರುತ್ತದೆ. ಅದೇ ಪ್ರಕಾರ ನಡೆಯಬೇಕಾಗುತ್ತದೆ. ಮೇಲಿನವರು ಬಗೆಹರಿಸುವ ಸಮಸ್ಯೆ ಇದಲ್ಲ ಎಂದರು. ಕರ್ನಾಟಕ ಹಾಗೂ ಗೋವಾ ಸರ್ಕಾರಗಳ ಮಧ್ಯೆ ಕ್ರಮಬದ್ಧವಾಗಿ ಮಾತುಕತೆ ನಡೆದು ಈ ಮಹದಾಯಿ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಇದರಲ್ಲಿಯೂ ರಾಜಕೀಯ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಪರಿಕ್ಕರ್ ಅವರು ಮೇಲಿಂದ ಮೇಲೆ ತಮ್ಮ ಮಾತುಗಳನ್ನು ಬದಲಿಸಬಾರದು. ಎರಡೂ ರಾಜ್ಯಗಳು ಮಾತುಕತೆ ನಡೆಸಿ, ನ್ಯಾಯಾಧೀಕರಣದ ಮೂಲಕವೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದರು.

 

 

 

Edited By

Shruthi G

Reported By

Madhu shree

Comments