ಬಿಜೆಪಿಯಲ್ಲಿರುವ ಕೆಲ ಬಳ್ಳಾರಿ ಪ್ರಬಲ ಗಣಿಧಣಿಗಳು ಜೆಡಿಎಸ್ ತೆಕ್ಕೆಗೆ....?

16 Jan 2018 10:36 AM | Politics
362 Report

ಕೆಲ ದಿನಗಳ ಹಿಂದಷ್ಟೇ, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಕೆಲ ಬಳ್ಳಾರಿ ಪ್ರಬಲ ಗಣಿಧಣಿಗಳು ಜೆಡಿಎಸ್ ತೆಕ್ಕೆಗೆ ಬೀಳುತ್ತಾರೆಂಬ ಸುದ್ದಿ ಇತ್ತು. ಈಗ ಅಸ್ನೋಟಿಕರ್ ಸೇರ್ಪಡೆಯೊಂದಿಗೆ ಬಳ್ಳಾರಿ ಗಣಿಧಣಿಗಳತ್ತ ಎಲ್ಲರ ಚಿತ್ತ ನೆಟ್ಟಿದೆ.

ಗಣಿ ಎಂದರೆ ಬಳ್ಳಾರಿ ಎಂಬ ಮಾತು ಇದೇ ಬಳ್ಳಾರಿಯ ಗಣಿ ದಣಿಗಳು ಕರ್ನಾಟಕದ ರಾಜಕಾರಣಿಗಳಲ್ಲೆ ಶ್ರೀಮಂತರು ಎಂಬ ಮಾತು ಇದೆ, ಈ ಗಣಿ ದಣಿಗಳು ಜೆಡಿಎಸ್​ ಬಿಟ್ಟು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಇದ್ದರು ಆದರೆ ಇಲ್ಲಿರುವ ಗಣಿದಣಿಗಳನ್ನು ತಮ್ಮ ವಶಕ್ಕೆ ಪಡೆಯಲು ಜೆಡಿಎಸ್​ ಪ್ಲಾನ್​ ಮಾಡಿದ್ದು ಈ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ತಮ್ಮ ಖಾತೆಯನ್ನು ತೆರಯಲು ಸಿದ್ದತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಬಳ್ಳಾರಿಯ ಗಣಿದಣಿಳಾದ ಜನಾರ್ಧನ ರೆಡ್ಡಿಯವರೊಂದಿಗೆ ಗುರ್ತಿಸಿಕೊಂಡಿದ್ದ ವಿಜಯ ನಗರ ಶಾಸಕ ಆನಂದ್​ ಸಿಂಗ್​ ಮತ್ತು ಕಾಂಗ್ರೆಸ್​ನ ಅನಿಲ್​ ಲಾಡ್​ ರವರು ಬಳ್ಳಾರಿಯಲ್ಲಿ ಸದ್ದು ಮಾಡಿದ ಗಣಿದಣಿಗಳು. ಈ ಇಬ್ಬರು ನಾಯಕರು ತಮ್ಮ ಪಕ್ಷಗಳನ್ನು ಬಿಟ್ಟು ಜೆಡಿಎಸ್​ ಸೇರಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಮಾತು ಕೇಳಿ ಬರಲಿಕ್ಕೂ ಕಾರಣಗಳಿವೆ.

ಗಾಲಿ ಜನಾರ್ಧನ ರೆಡ್ಡಿಯವರು ಜೈಲು ಪಾಲಾದ ಮೇಲೆ ಆನಂದ್​ ಸಿಂಗ್​ ರಾಜಕೀಯವಾಗಿ ತೆರೆಮರೆಗೆ ಸರಿದಿದ್ದರು ಎನ್ನಬಹುದು ಏಕೆಂದರೆ ಅವರು ಬಿಜೆಪಿ ಶಾಸಕರಾಗಿದ್ದರೂ ಕೂಡ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಮತ್ತೊಂದೆಡೆ ರಾಜ್ಯಾಧ್ಯಂತ ಬಿಜೆಪಿ ಟಿಪ್ಪು ಸುಲ್ತಾನ್​ ಜಯಂತಿಯನ್ನು ವಿರೋಧಿಸಿದರೆ ಆನಂದ್​ ಸಿಂಗ್​ ತಮ್ಮ ಕ್ಷೇತ್ರದಲ್ಲಿ ಟಿಪ್ಪು ಜಯಂತಿ ಆಚರಿಸುವ ಮೂಲಕ ರಾಜ್ಯ ಬಿಜೆಪಿಗೆ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದರು. ಆಗಿನಿಂದಲೇ ಆನಂದ್​ ಸಿಂಗ್​ ಪಕ್ಷ ತೊರೆಯುತ್ತಾರೆ ಎಂಬ ಮಾತು ಕೇಳಿಬಂದಿತ್ತು ಆದರೆ ಯಾವ ಪಕ್ಷ ಸೇರುತ್ತಾರೆ ಎಂಬ ಮಾಹಿತಿ ಇರಲಿಲ್ಲ. ಆದರೆ ಈಗಿನ ಮಾಹಿತಿ ಪ್ರಕಾರ ಆನಂದ್​ ಸಿಂಗ್​ ಜೆಡಿಎಸ್​ ಸೇರುತ್ತಾರೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

Edited By

Shruthi G

Reported By

Madhu shree

Comments