ಬಿಜೆಪಿಗೆ ಕೌಂಟರ್ ನೀಡಲು ಮುಂದಾದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ

13 Jan 2018 11:02 AM | Politics
373 Report

ಹೌದು, ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ದಿಢೀರ್ ಕೆಪಿಸಿಸಿ ಐಟಿ ಸೆಲ್ ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಐಟಿ ಸೆಲ್‍ನ ಕಾರ್ಯ ನಿರ್ವಾಹಣೆ ಬಗ್ಗೆ ಮಾಹಿತಿ ಪಡೆದ ರಮ್ಯಾ ಸೋಶಿಯಲ್ ಮೀಡಿಯಾ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಪರಿಶೀಲನೆ ನಡೆಸಿದ್ದಾರೆ.

ಸೋಶಿಯಲ್ ಮಿಡಿಯಾ ತಂಡದ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ರಮ್ಯಾ ಮತ್ತಷ್ಟು ಸಕ್ರಿಯರಾಗುವಂತೆ ಸಲಹೆ ನೀಡಿದ್ದಾರೆ. ಈ ವೇಳೆ ಇನ್ನೊಂದು ತಿಂಗಳೀನಲ್ಲಿ ನಾನೇ ರಾಜ್ಯಕ್ಕೆ ಬಂದು ಚುನಾವಣೆ ಮುಗಿಯುವ ವರೆಗೆ ಇಲ್ಲಿಂದಲೆ ಐಟಿ ಸೆಲ್ ಹ್ಯಾಂಡಲ್ ಮಾಡುವುದಾಗಿ ಹೇಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಗುಜರಾತ್‍ನಲ್ಲಿ ಪ್ರಧಾನಿ ಮೋದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದ ಮಾದರಿಯಲ್ಲೇ ರಾಜ್ಯದಲ್ಲೂ ಬಿಜೆಪಿಗೆ ಕೌಂಟರ್ ನೀಡಲು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಮುಂದಾಗಿದ್ದಾರೆ.

Edited By

Shruthi G

Reported By

Madhu shree

Comments