ಗೊಮಟೇಶ್ವರನ ಮಾನವನ್ನು ಮುಚ್ಚಲು ಬಟ್ಟೆ ಹಾಕಿ ಸಿಧ್ದರಾಮಯ್ಯನವರೇ..!!

11 Jan 2018 11:54 AM | Politics
297 Report

ಮಾನವನ ಪ್ರಗತಿಯು ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಾ ಸಾಗಿದೆ. ಹೀಗಾಗಿ ದಿಗಂಬರರಾಗಿರುವ ಬಾಹುಬಲಿಯನ್ನು ನೋಡೋದಕ್ಕೆ ಅಸಹ್ಯ ಅನಿಸುತ್ತದೆ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ನವರು ಇದರ ಬಗ್ಗೆ ಗಮನ ಹರಿಸಿ ಬಟ್ಟೆ ಹಾಕಲಿ. ಕಾಲ ಈಗ ಬದಲಾಗಿದೆ, ಬಾಹುಬಲಿನಾ ನೋಡೋಕೆ ಕಷ್ಟವಾಗಲಿದೆ. ಇದ್ರಿಂದ ಧಾರ್ಮಿಕ ನಂಬಿಕೆಯ ವಿಚಾರ ಬರೋದಿಲ್ಲ. ಕನಿಷ್ಠ ಗೊಮಟೇಶ್ವರನ ಮಾನವನ್ನು ಮುಚ್ಚಲು ಚಡ್ಡಿಯಾದರೂ ಹಾಕಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮಾನ ಮುಚ್ಚಲು ಬಾಹುಬಲಿ ಪತ್ರಿಮೆಗೆ ಬಟ್ಟೆ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತರೊಬ್ಬರು ಪತ್ರದ ಮೂಲಕ ವಿಚಿತ್ರ ಮನವಿ ಸಲ್ಲಿಸಿದ್ದಾರೆ. ಪ್ರಭು ಎಂಬವರು ಸಿದ್ದರಾಮಯ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೂ ಈ ಪತ್ರ ಬರೆದು ಬಟ್ಟೆ ಹಾಕುವಂತೆ ಮನವಿ ಮಾಡಿದ್ದಾರೆ. ಆಗಿನ ಸಂದರ್ಭದಲ್ಲಿ ಧರ್ಮಗುರು ಬಾಹುಬಲಿಯವರು ತೆಗೆದುಕೊಂಡಂತ ನಿರ್ಧಾರವು ಅವರಿಗೆ ಸರಿ ಅನಿಸಿರಬಹುದು. ಆದ್ರೆ ಅಂದಿನಿಂದ ಇಂದಿನವರೆಗೆ ಮಾನವನ ವಿಕಾಸದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.  

ದಿನದಿಂದ ದಿನಕ್ಕೆ ಮಾನವನ ಜೀವನದ ಶೈಲಿಗಳು, ಮಾನವನ ವಿಕಾಸವೂ ಉನ್ನತೀಕರಣವಾಗಿ ಪ್ರತಿಯೊಬ್ಬರೂ ಜೀವನದ ಮೌಲ್ಯಗಳನ್ನು ತಿಳಿದುಕೊಂಡು, ತಂತ್ರಜ್ಞಾನದಿಂದ ಜಗತ್ತಿನ ಆಗುಹೋಗುಗಳನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳುವ ಇಂತಹ ಸಂದರ್ಭದಲ್ಲಿ ಜೈನ ಧರ್ಮಗುರು ಬಾಹುಬಲಿಯವರು 9ನೇ ಶತಮಾನದಲ್ಲಿ ದಿಗಂಬರರಾಗಿದ್ದರು ಎನ್ನುವ ಕಾರಣದಿಂದ ಅಲ್ಲಿಂದ ಇಲ್ಲಿಯವರೆಗೆ ಧರ್ಮಗುರು ಬಾಹುಬಲಿಯವರನ್ನು ಹಾಗೆಯೇ ದಿಗಂಬರರಾಗಿ ಉಳಿಸಿಕೊಂಡಿರುವುದು ಒಂದು ವಿಪರ್ಯಾಸವೇ ಆಗಿದೆ. ಇದು ಮೌಢ್ಯತೆಗೆ ಹಿಡಿದ ಕನ್ನಡಿಯಾಗಿದೆ.

Edited By

Shruthi G

Reported By

Madhu shree

Comments