ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಸ್ಯಾಂಡಲ್ ವುಡ್ ನಟ

09 Jan 2018 11:30 AM | Politics
330 Report

ಇತ್ತೀಚೆಗೆ ಸ್ಯಾಂಡಲ್ ವುಡ್ ನಟ-ನಟಿಯರು ರಾಜಕೀಯಕ್ಕೆ ಇಳಿಯುತ್ತಿರುವುದರ ಬಗ್ಗೆ ಸುದ್ದಿಯಾಗುತ್ತಿದ್ದು, ಈಗ ಮತ್ತೊಬ್ಬ ನಟ ರಾಜಕೀಯದತ್ತ ಮುಖಮಾಡಿರುವುದಾಗಿ ತಿಳಿದುಬಂದಿದೆ. ಹಿಂದೆ ಚಿತ್ರದುರ್ಗ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ನಂತರ ರಾಜಕಾರಣ ಜೀವನದಿಂದ ದೂರಾದ ನಟ ಶಶಿಕುಮಾರ್ ಅವರು ಈಗ ಮತ್ತೆ ರಾಜಕೀಯದ ಕಣಕ್ಕೆ ಇಳಿಯುತ್ತಿದ್ದಾರಂತೆ.

ಮುಂದೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಶಶಿಕುಮಾರ್ ಚಿತ್ರದುರ್ಗ ಜಿಲ್ಲೆಯ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು 'ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮೊಳಕಾಲ್ಮೂರು ಅಥವಾ ಚಳ್ಳಕೆರೆ ಕ್ಷೇತ್ರದಿಂದ ಸ್ಪರ್ಧಿಸುವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ. ಸಾಧನಾಸಮಾವೇಶದ ಬಳಿಕ ತಿರ್ಮಾನ ಮಾಡುವುದಾಗಿ ಸಿ.ಎಂ.ತಿಳಿಸಿದ್ದಾರೆ' ಎಂದು ಶಶಿಕುಮಾರ್ ಅವರು ಹೇಳಿದ್ದಾರೆ. 

Edited By

Shruthi G

Reported By

Madhu shree

Comments