ಕರಾವಳಿ ಪ್ರದೇಶದಲ್ಲಿ ಈ ಬಾರಿ ಜೆಡಿಎಸ್ ಖಾತೆ ತೆರೆಯಲಿದೆ

06 Jan 2018 3:24 PM | Politics
256 Report

ನಮ್ಮಪ್ಪನ ಮೇಲೆ ಆಣೆ ಯಾಕೆ ಮಾಡ್ತಾರೆ, ನಮ್ಮಪ್ಪನನ್ನು ಅವರಿಗೆ ಯಾವಾಗ ಕೊಟ್ಟಿದ್ದೇವೆ. ಬೇಕಿದ್ರೆ ಅವರಪ್ಪನ ಮೇಲೆ ಆಣೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಜಿಲ್ಲೆಯ ಬಾದಾಮಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯನವರ ಘೋಷಣೆಗಳು   ಬರಿ ಬೋಗಸ್ ಘೋಷಣೆಗಳು. ಅನ್ನಭಾಗ್ಯ ಯೋಜನೆ ಆಹಾರ ಭದ್ರತಾ ಕಾಯ್ದೆಯಿಂದಾಗಿ ಕೊಡಬೇಕಾದ ಜವಾಬ್ದಾರಿ,ಇನ್ನೂ ಕ್ಷೀರಭಾಗ್ಯಕ್ಕೆ ಬಂದರೆ ಸಿದ್ದರಾಮಯ್ಯ ಸರ್ಕಾರಕ್ಕೆ ರಾಜ್ಯದಲ್ಲಿ ಉತ್ಪಾದನೆಯಾಗುವ ಹಾಲು ಹೊರದೇಶಕ್ಕೆ ಮಾರಾಟ ಮಾಡೋ ಯೋಗ್ಯತೆ ಇಲ್ಲ, ಉಳಿದುಕೊಳ್ಳುವ ಹಾಲನ್ನು ರಸ್ತೆಗೆ ಚಲ್ಲಬೇಕಾಗುತ್ತದೆ ಎಂದು ಕೊಡ್ತಿದ್ದಾರೆ ಎಂದು ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬರುವ ಸಂಕ್ರಾಂತಿ ಹಬ್ಬದ ಆಸುಪಾಸಿನಲ್ಲಿ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ. ಮೊದಲ ಪಟ್ಟಿಯಲ್ಲಿ 150 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

ಧರ್ಮವನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ. ಧರ್ಮದ ಹೆಸರಿನಲ್ಲಿ ರಕ್ತದೋಕುಳಿಯಾಗುತ್ತಿದೆ. ಹಲವು ಜನರ ಕೊಲೆಗಳು ನಡೆದಿವೆ. ಕೇವಲ ಕರಾವಳಿ ಭಾಗದಲ್ಲಿ ಮಾತ್ರ ಕೋಮು ಗಲಭೆಗಳು ಯಾಕೆ ನಡೆಯುತ್ತಿವೆ? ಹುಬ್ಬಳ್ಳಿ, ಬಾಗಲಕೋಟೆ, ಬೆಳಗಾವಿಯಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದರು. ಕರಾವಳಿ ಭಾಗದಲ್ಲಿ ಎರಡೂ ರಾಜಕೀಯ ಪಕ್ಷಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿವೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕರಾವಳಿ ಪ್ರದೇಶದಲ್ಲಿ ಈ ಬಾರಿ ಜೆಡಿಎಸ್ ಖಾತೆ ತೆರೆಯಲಿದೆ. ಜನರ ಒಲವು ನಮ್ಮ ಪರವಾಗಿದೆ.ಸಿ ಓಟರ್ ಸಮೀಕ್ಷೆ ಬಗ್ಗೆ ಮಾತನಾಡಿದ ಅವರು ಚುನಾವಣಾ ಸಮೀಕ್ಷೆ ಮಾಡಿಸಿದ ಸಿ ಓಟರ್ ಸಂಸ್ಥೆ ಮಾಲೀಕ ಸಿಎಂ ಆಪ್ತನಾಗಿರುವುದರಿಂದ ಅವರು ಮತ್ತ್ಯಾರ ಪರವಾಗಿ ಸಮೀಕ್ಷೆ ಕೊಡ್ತಾರೆ ಎಂದರು.ಇನ್ನು ತಾವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸಾರಾಯಿ ನಿಷೇಧಿಸುತ್ತೇನೆ. ಆದರೆ ಈಗಲೇ ಬಹಿರಂಗವಾಗಿ ಹೇಳಲ್ಲ, ಏಕೆಂದರೆ ಚುನಾವಣೆಯಲ್ಲಿ ಸಾರಾಯಿ ಕುಡಿಯುವರು ನಮಗೆ ಮತ ಹಾಕದೆ ಹೋಗಬಹುದು ಎಂದು ಎಚ್.ಡಿ.ಕುಮಾರಸ್ವಾಮಿ ತಮಾಷೆ ಮಾಡಿದರು.

Edited By

Shruthi G

Reported By

Shruthi G

Comments