ಮುಖ್ಯಮಂತ್ರಿ ಆದವರಿಗೆ ಘನತೆ, ಗೌರವ ಇರಬೇಕು: ಸಿಎಂಗೆ ಎಚ್ ಡಿಕೆ ಚಾಟಿ

06 Jan 2018 10:11 AM | Politics
409 Report

ಜೆಡಿಎಸ್‌ ಹಾಗೂ ದೇವೇಗೌಡರ ಬಗ್ಗೆ ಯಾರೂ ಟೀಕೆ ಮಾಡಬೇಡಿ ಎಂದು ಬಿಜೆಪಿಯವರಿಗೆ ಅಮಿತ್‌ ಶಾ ಹೇಳಿದ್ದಾರೆ. ಅದೇ ರೀತಿ, ಪ್ರಧಾನಮಂತ್ರಿ ಕುರಿತು ಯಾರೂ ಹಗುರವಾಗಿ ಮಾತನಾಡಬಾರದು ಎಂದು ಜೆಡಿಎಸ್‌ ನಾಯಕರಿಗೆ ದೇವೇಗೌಡ ಹೇಳಿದ್ದಾರೆ ಎಂದು ಸಿದ್ದರಾಮಯ್ಯಗೆ ಯಾರೋ ಕಿವಿ ಚುಚ್ಚಿದ್ದಾರೆ. ಅದನ್ನೇ ನಂಬಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಾತು ಮಾತಿಗೂ ಆಣೆಯ ಪ್ರಸ್ತಾಪ ಮಾಡುತ್ತಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ. ಒಬ್ಬ ಮುಖ್ಯಮಂತ್ರಿ ಮಾತನಾಡುವ ಮಾತು ಇದಲ್ಲ. ಮುಖ್ಯಮಂತ್ರಿ ಆದವರಿಗೆ ಘನತೆ ಹಾಗೂ ಗೌರವ ಇರಬೇಕು. ಮಾತನಾಡುವಾಗ ಆ ಹುದ್ದೆಯ ಮಾನ ಕಾಪಾಡಬೇಕು ಎಂದು ಚಾಟಿ ಬೀಸಿದರು. ಸರಕಾರದ ಸಾಧನಾ ಸಮಾವೇಶಗಳಲ್ಲಿ ಮಾತು ಮಾತಿಗೂ ಕುಮಾರಸ್ವಾಮಿ ಅವರ ಅಪ್ಪನಾಣೆಗೆ ಮುಖ್ಯಮಂತ್ರಿ ಆಗುವುದಿಲ್ಲ. ಜೆಡಿಎಸ್‌ ಸರಕಾರ ರಚನೆ ಮಾಡುವುದಿಲ್ಲ. ಯಡಿಯೂರಪ್ಪ ಅವರಪ್ಪನಾಣೆಗೂ ಮುಖ್ಯಮಂತ್ರಿ ಆಗುವದಿಲ್ಲ ಎಂದು ಸಿದ್ದರಾಮಯ್ಯ ಟೀಕೆ ಮಾಡುತ್ತಿದ್ದಾರೆ. ನಮ್ಮಪ್ಪ ಇವರಿಗೆ ಬಿಟ್ಟಿ ಸಿಕ್ಕಿದ್ದಾರೆಯೇ' ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.

Edited By

Shruthi G

Reported By

Madhu shree

Comments

Cancel
Done