ವೈಟ್‍ಹೌಸಿನ ರಾಜಕಾರಣಿಗಳ ದಾಳ ಉರುಳಿಸಿದ ದೇವೇಗೌಡ್ರು..!!

03 Jan 2018 5:36 PM | Politics
7146 Report

ನಾಲ್ಕೈದು ದಶಕಗಳ ಕಾಂಗ್ರೆಸ್ ನಂಟಿಗೆ ಗುಡ್ ಬೈ ಹೇಳಿದ ಇಲ್ಲಿನ ವೈಟ್ ಹೌಸಿನ ರಾಜಕಾರಣಿಗಳನ್ನು ತಮ್ಮ ಪಕ್ಷಕ್ಕೆ ಸೆಳೆಯಲು ದೇವೇಗೌಡರು ಸೈಲೆಂಟಾಗಿ ಗಾಳ ಸಿದ್ಧ ಮಾಡಿದ್ದಾರೆ ಎನ್ನಲಾಗುತ್ತಿದೆ.

ಜೆಡಿಎಸ್ ಪಕ್ಷದಿಂದ ಗೆದ್ದು ಈಗ ಮಾತೃಪಕ್ಷಕ್ಕೆ ಬೆನ್ನು ಹಾಕಿ ನಿಂತಿರುವ ಶಾಸಕ ಇಕ್ಬಾಲ್ ಅನ್ಸಾರಿಯನ್ನು ಹೇಗಾದರೂ ಮಾಡಿ ಈ ಚುನಾವಣೆಯಲ್ಲಿ ಮಟ್ಟಹಾಕಬೇಕು ಎಂದು ದಳಪತಿಗಳು ಚಿಂತನೆ ನಡೆಸಿದ್ದು, ಈಗ ಶತ್ರುವಿನ ಶತ್ರು ಮಿತ್ರ ಎಂಬ ಬಾಣ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳ ಕೇಳಿಬರುತ್ತಿವೆ.ಪ್ರಯೋಗದ ನೇತೃತ್ವವನ್ನು ಸ್ವತಃ ದೇವೇಗೌಡರೇ ವಹಿಸಿಕೊಂಡಿದ್ದು, ಮಾಜಿ ಎಂಎಲ್‍ಸಿ ಹೆಚ್.ಆರ್. ಶ್ರೀನಾಥ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದೇವೇಗೌಡರು ಶೃಂಗೇರಿ ಶಾರದಾಂಬ ದೇಗುಲದಲ್ಲಿ ವಿಶೇಷ ಪೂಜೆಗಾಗಿ ತೆರಳಿದ್ದು, ಜ.7ರ ಬಳಿಕ ಆಗಮಿಸಲಿದ್ದಾರೆ. ಆ ಬಳಿಕ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಮಾಜಿ ಸಂಸದ ಹೆಚ್.ಜಿ.ರಾಮುಲು ಅವರನ್ನು ಭೇಟಿಯಾಗಿ ದೇವೇಗೌಡರು ಮಾತನಾಡಲಿದ್ದಾರೆ ಎಂದು ಜೆಡಿಎಸ್ ಪಕ್ಷದ ಗಂಗಾವತಿ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಮಾಹಿತಿ ನೀಡಿದ್ದಾರೆ.

Edited By

Shruthi G

Reported By

Shruthi G

Comments

Cancel
Done