ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಆಕ್ರೋಶ

03 Jan 2018 2:06 PM | Politics
320 Report

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ.ದೇವೇಗೌಡರು, ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್​ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಅದರ ಪರಿಣಾಮ ಏನಾಗಿರುತ್ತಿತ್ತು ಎಂಬ ಅರಿವು ಸಿಎಂಗೆ ಇಲ್ಲವೇ ಎಂದು ಪ್ರಶ್ನಿಸಿದರು.

ಹತ್ತು ಸಾವಿರ ಮತ ಪಡೆಯುವ ಸಾಮರ್ಥ್ಯ ನಮ್ಮ ಅಭ್ಯರ್ಥಿಗಳಿಗೆ ಇರಲಿಲ್ಲವೇ? ಜೆಡಿಎಸ್ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗುತ್ತಿತ್ತು. ಆದರೆ ಇದೆಲ್ಲ ಸ್ಮರಿಸದ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ಚುನಾ ವಣೆಯಲ್ಲಿ ಜೆಡಿಎಸ್ 25ಕ್ಕಿಂತ ಅಧಿಕ ಸ್ಥಾನ ಗಳಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇಂಥ ರಾಜಕಾರಣಿ ಯನ್ನು ಎಂದೂ ಕಂಡಿರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮ ಒಡೆಯುವುದಕ್ಕಾಗಿಯೇ ಇಬ್ಬರು ಮಂತ್ರಿಗಳನ್ನು ಬಿಟ್ಟಿದ್ದಾರೆ. ಸಾಧನಾ ಸಮಾವೇಶಕ್ಕೆ ಜನ ಸೇರಿಸುವ ಜವಾಬ್ದಾರಿಯನ್ನು ಎಲ್ಲ ಇಲಾಖೆ ಅಧಿಕಾರಿಗಳಿಗೆ ವಹಿಸಲಾಗಿದೆ. ಜ. 4 ರಂದು ಹಾಸನಕ್ಕೆ ಸಿಎಂ ಭೇಟಿ ನೀಡುತ್ತಿದ್ದು, ಇಲ್ಲಿ ಏನು ಭಾಷಣ ಮಾಡುತ್ತಾರೋ ಕೇಳಿ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದರು. ಫೆ. 15ರೊಳಗೆ ಕುಮಾರಸ್ವಾಮಿ, ನಾನು ರಾಜ್ಯ ಪ್ರವಾಸ ಮುಗಿಸುತ್ತೇವೆ ಎಂದರು.

Edited By

Shruthi G

Reported By

Shruthi G

Comments