ರಾಹುಲ್ ರಾಜ್ಯಕ್ಕೆ ಬಂದು ಸಿದ್ದರಾಮಯ್ಯರನ್ನು ಸಿಎಂ ಎಂದು ಘೋಷಿಸಲಿ : ಎಚ್ ಡಿಡಿ ಸವಾಲು

30 Dec 2017 5:17 PM | Politics
433 Report

ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಎಚ್ ಡಿ ದೇವೇಗೌಡರು, ಸಿಎಂ, ಪರಮೇಶ್ವರ್ ಪ್ರವಾಸಕ್ಕೆ ಎಷ್ಟು ಜನ ಸೇರಿದ್ದಾರೆಂದು ನೋಡಿದ್ದೇನೆ. ಅವರದ್ದು ಸರ್ಕಾರಿ ಕಾರ್ಯಕ್ರಮವೋ, ಪ್ರಚಾರ ಕಾರ್ಯಕ್ರಮವೋ ಎಂದು ತಿಳಿಯುವುದಿಲ್ಲ. ರಾಹುಲ್ ಗಾಂಧಿ ರಾಜ್ಯಕ್ಕೆ ಬರಲಿ ನೋಡೋಣ. ಸಿದ್ದರಾಮಯ್ಯ ಅವರನ್ನೇ ಸಿಎಂ ಎಂದು ಘೋಷಿಸಲಿ ನೋಡೋಣ ಎಂದು ಸವಾಲೆಸೆದರು.

ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೆಡೆ ಪ್ರವಾಸ ಮಾಡುತ್ತಿದ್ದಾರೆ. ಜಿ.ಪರಮೇಶ್ವರ್ ಒಂದು ಕಡೆ ಪ್ರವಾಸ ಮಾಡುತ್ತಿದ್ದಾರೆ ನಮ್ಮದು ಹಾಗಲ್ಲ, ನಾನು, ಕುಮಾರಸ್ವಾಮಿ ಒಟ್ಟಿಗೆ ಪ್ರವಾಸ ಮಾಡುತ್ತೇವೆ ಎಂದರು. ನಮ್ಮ ಕೈಯಲ್ಲಿ ಅಧಿಕಾರ ಇಲ್ಲ. ಹಾಗಾಗಿ ರಾಜ್ಯ ಪ್ರವಾಸ ಮಾಡುತ್ತೇವೆ. ರಾಹುಲ್‌ಗಾಂಧಿ, ಸೋನಿಯಾ ಗಾಂಧಿ ಬಗ್ಗೆ ಎಲ್ಲಿಯೂ ಲಘುವಾಗಿ ಮಾತನಾಡಿಲ್ಲ. ಮೋದಿಯವರ ಬಗ್ಗೆಯೂ ನಾನು ಮಾತನಾಡಿಲ್ಲ. ನಮ್ಮ ಕೆಲಸ ಬೇರೆ ಇದೆ ಎಂದರು.


Edited By

Suresh M

Reported By

Madhu shree

Comments