ಹೆಗಡೆ ಹಾಗೂ ಸಿದ್ದರಾಮಯ್ಯ ನವರ ಮಾತಿಗೆ ಕಡಿವಾಣ ಬೇಕಿದೆ : ಬಸವರಾಜ ಹೊರಹಟ್ಟಿ

30 Dec 2017 11:38 AM | Politics
351 Report

ಜನಾಭಿಪ್ರಾಯ ಸಂಗ್ರಹದ ನಂತರವೇ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ವರಿಷ್ಠರು ಪ್ರಕಟಿಸುತ್ತಾರೆ. ಈಗಾಗಲೇ ಮೊದಲ ಸುತ್ತಿನ ಸಮೀಕ್ಷೆ ಮುಗಿದಿದೆ. ಎರಡನೇ ಸುತ್ತು ಪೂರ್ಣಗೊಂಡ ತಕ್ಷಣ ಅಧಿಕೃತ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಮನೆಗೆ ರೈಲ್ವೆ ಸಚಿವ ಪೀಯೂಷ್ ಗೋಯಲ್ ಭೇಟಿ ನೀಡಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಅತಂತ್ರ ವಿಧಾನಸಭೆಗೆ ರಾಜ್ಯದ ಜನತೆ ಅವಕಾಶ ನೀಡುವುದಿಲ್ಲ. ಪಕ್ಷ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾತಿನಲ್ಲಿ ಸಂಯಮವಿರಲಿ,'ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಹಲವು ಬಾರಿ ಸೂಚನೆ ನೀಡಿದ್ದೆ. ನಾನೂ ಸೇರಿದಂತೆ ಎಲ್ಲರೂ ಮಾತನಾಡುವಾಗ ಎಚ್ಚರವಹಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿಗೂ ಕಡಿವಾಣ ಬೇಕಿದೆ' ಎಂದರು.

ಮಹದಾಯಿ ವಿಚಾರದಲ್ಲಿ ಮೋದಿ ಅವರ ವಿರುದ್ಧ ಟೀಕೆ ಮಾಡುವ ಕಾಂಗ್ರೆಸ್ ಮುಖಂಡರು, ಅವರದೇ ಮನಮೋಹನ್ ಸಿಂಗ್ 10 ವರ್ಷ ಪ್ರಧಾನಿಯಾಗಿದ್ದಾಗ ಏಕೆ ಮೌನವಾಗಿದ್ದರು? ಇದೇ ಸಿದ್ದರಾಮಯ್ಯ ಎಂಟು ತಿಂಗಳ ಹಿಂದೆ ನ್ಯಾಯ ಮಂಡಳಿಗೆ ತೀರ್ಪು ಬರುವವರೆಗೂ ಕಾತಯತ್ತೇವೆ ಎಂದು ಏಕಪಕ್ಷೀಯವಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಗೋವಾ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ತಮ್ಮ ಪಕ್ಷದ ನಾಯಕರ ಜತೆ ಮಾತನಾಡಲಿ ಎಂದು ಒತ್ತಾಯಿಸಿದರು.

Edited By

Shruthi G

Reported By

Madhu shree

Comments