ಸಚಿವ ಅನಂತ್ ಕುಮಾರ್ ಹೆಗಡೆಗೆ ಸೂಲಿಬೆಲೆ ಟಾಂಗ್

28 Dec 2017 2:50 PM | Politics
267 Report

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಚಿಂತಕ,ವಾಗ್ಮಿ,ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಟಾಂಗ್ ನೀಡಿದ್ದಾರೆ. ಇದಕ್ಕೆ ಕಾರಣವಾಗಿರುವುದು ಚಕ್ರವರ್ತಿ ಅವರ ಬ್ಲಾಗ್ 'ನೆಲದ ಮಾತು'ವಿನಲ್ಲಿ ಬರೆದಿರುವ ಅಭಿಪ್ರಾಯ.

ಸಂವಿಧಾನ ತಿದ್ದುಪಡಿ,ಜತ್ಯಾತೀತರು ಅಪ್ಪ, ಅಮ್ಮನ ಮುಖ ನೋಡದವರು. ಅವರ ರಕ್ತದ ಬಗ್ಗೆ ಸಂಶಯವಿದೆ ಎಂದಿದ್ದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತ ವಾದ ಬೆನ್ನಲ್ಲೇ ಸೂಲಿಬೆಲೆ ಈ ಲೇಖನ ಬರೆದಿದ್ದಾರೆ. ತಮ್ಮ ಅಭಿಪ್ರಾಯದ ಬಗ್ಗೆ ಮಾಧ್ಯಮಗಳಲ್ಲಿ ಭಾರೀ ಸುದ್ದಿ ಪ್ರಕಟವಾಗಿರುವ ಚಕ್ರವರ್ತಿ ಅವರು ನಾನು ಯಾರನ್ನೂ ಗುರಿಯಾಗಿರಿಸಿಕೊಂಡು ಬರೆದಿಲ್ಲ, ರಾಜಕಾರಣಿಗಳನ್ನು ಸಾರ್ವತ್ರಿಕ ವಾಗಿ ಗುರಿಯಾಗಿರಿಸಿಕೊಂಡು ಬರೆದಿದ್ದೇನೆ.ನಾನು ಯಾರ ಪರವೂ ಇಲ್ಲ, ಯಾರ ವಿರೋಧಿಯೂ ಅಲ್ಲ, ನನಗೆ ನನ್ನ ಕರ್ನಾಟಕ ರಾಜ್ಯದ ಹಿತ ಮುಖ್ಯ ಎಂದಿದ್ದಾರೆ. ಆಡಳಿತದ ಚುಕ್ಕಾಣಿ ಹಿಡಿದವರು ಸ್ವಲ್ಪ ತಲೆ ಕೆಡಿಸಿಕೊಳ್ಳಬೇಕಷ್ಟೇ. ಟಿಪ್ಪೂ ಜಯಂತಿ ಮಾಡಿದ್ದರಿಂದ ಮತ ಮತಗಳ ನಡುವೆ ಭಡಕಾಯಿಸಲಷ್ಟೇ ಸಾಧ್ಯವಾಯಿತು. ಅದರಿಂದ ಉದ್ಯೋಗವು ಹುಟ್ಟಲಿಲ್ಲ, ಪ್ರವಾಸೋದ್ಯಮದ ಆಸ್ಥೆಯೂ ಬೆಳೆಯಲಿಲ್ಲ. ವೋಟುಬ್ಯಾಂಕಿನ ರಾಜಕಾರಣವನ್ನು ಅಷ್ಟು ಶ್ರದ್ಧೆಯಿಂದ ಮಾಡಿದ ಮುಖ್ಯಮಂತ್ರಿಗಳು ಸ್ವಲ್ಪ ಪ್ರವಾಸೋದ್ಯಮದ ಕಡೆಗೆ ಹರಿಸಿದ್ದರೆ ನಾವಿಂದು ಬೆಂಗಳೂರೊಂದನ್ನೇ ಮುಂದಿಟ್ಟು ಬಂಡವಾಳ ಸಂಗ್ರಹ ಮಾಡಬೇಕಿರಲಿಲ್ಲ.

ಉದ್ಯೋಗ ಸೃಷ್ಟಿಗಾಗಿ ಎಲ್ಲ ಸರ್ಕಾರಗಳೂ ಹೆಣಗಾಡುತ್ತಿವೆ. ಕೃಷಿ ಮತ್ತು ಕೃಷಿ ಆಧಾರಿತ ವ್ಯವಸ್ಥೆಯನ್ನು ಸಂಪೂರ್ಣ ನಾಶಗೊಳಿಸಿದ ಆಂಗ್ಲರು ಭಾರತದಲ್ಲಿ ಉದ್ಯೋಗವಿಲ್ಲದೇ ದಾರಿದ್ರ್ಯಕ್ಕೆ ಸಿಲುಕಿದ ಜನಾಂಗವನ್ನು ಸೃಷ್ಟಿಸಿದರು. ಸ್ವಾತಂತ್ರ್ಯಾನಂತರವೂ ನಾವು ನಮ್ಮ ಆಂತರಿಕ ಶಕ್ತಿಯನ್ನು ಬಳಸಿ ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನಕ್ಕೆ ಕೈಹಾಕಲೇ ಇಲ್ಲ. ಬದಲಿಗೆ ಉಚಿತ ಕೊಡುಗೆಗಳನ್ನು ಕೊಟ್ಟು ಜನರನ್ನು ಸಾಕುವ ಪ್ರಯತ್ನ ಮಾಡಿದೆವು. ರೈತರಿಗೆ ಸಬ್ಸಿಡಿ, ಬಡವರಿಗೆ ಬಿಪಿಎಲ್, ಉಚಿತ ಅನ್ನ, ಶಾಲೆಗೆ ಬಂದರೆ ಐನೂರು, ಕೆಲಸ ಮಾಡದಿದ್ದರೂ ಸಾವಿರ ಹೀಗೆಯೇ ಕಂಡ ಕಂಡಲೆಲ್ಲ ದುಡ್ಡು ಹಂಚಲಾರಂಭಿಸಿದೆವು. ಹಾಗಂತ ಭಾರತದಲ್ಲಿ ಇದು ಇರಲಿಲ್ಲವೆಂದಲ್ಲ. ಬಡವರಿಗೆ, ಅಶಕ್ತರಿಗೆ ಬೇಕಾದ ಸೌಲಭ್ಯಗಳನ್ನು ಮಾಡಿಕೊಡುವುದು ರಾಜನದ್ದೇ ಕರ್ತವ್ಯ. ಇರುವ ಎಲ್ಲ ಚಿನ್ನದ ಗಣಿಗಳು ಮುಚ್ಚಿದ ನಂತರವೂ ಕರ್ನಾಟಕ ಚಿನ್ನದ ಗಣಿಯೇ! ,ಚಿನ್ನ ಅರಸುವ ಸೂಕ್ಷ್ಮತೆ ಇರುವ ನಾಯಕ ಬೇಕಷ್ಟೇ ಎಂದರು.

Edited By

Shruthi G

Reported By

Madhu shree

Comments