ಬಿಎಸ್ ವೈ ವಿರುದ್ಧ ಭುಗಿಲೆದ್ದ ರೈತರ ಆಕ್ರಂದನ

27 Dec 2017 10:40 AM | Politics
358 Report

ಡಿಸೆಂಬರ್ 18 ರ ವೇಳೆಗೆ ಮಹಾದಾಯಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ ಬೆನ್ನಲ್ಲೇ ದೆಹಲಿಯಲ್ಲಿ ಇತ್ತೀಚೆಗೆ ಮಾತುಕತೆ ನಡೆದಿತ್ತು ಆದರೆಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಮಹಾದಾಯಿ ನದಿ ನೀರಿನ ವಿಚಾರವಾಗಿ ಯಾವುದೇ ಸ್ಪಷ್ಟನೆ ಭರವಸೆ ನೀಡದ ಹಿನ್ನೆಲೆಯಲ್ಲಿ ರೈತರು ರೊಚ್ಚಿಗೆದ್ದಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಮೆರವಣಿಗೆ ವೇಳೆ ಹುಬ್ಬಳ್ಳಿಯಲ್ಲಿ ಮಹಾದಾಯಿ ನೀರಿನ ವಿವಾದ ಇತ್ಯರ್ಥವನ್ನು ಘೋಷಿಸುವ ನಂಬಿಕೆ ಇತ್ತು. ಏಕಾಏಕಿ ಬಿಜೆಪಿ ಪ್ರಯತ್ನ ಫಲಿಸದ ಕಾರಣದಿಂದಾಗಿ ರೈತರು ರೊಚ್ಚಿಗೆದ್ದಿದ್ದಾರೆ, ಮತ್ತೊಂದೆಡೆ ಉತ್ತರ ಕರ್ನಾಟಕ ಬಂದ್ ಕಾರಣದಿಂದಾಗಿ, ಕರ್ನಾಟಕ, ಗೋವಾ ನಡುವೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೆಳಗಾವಿ, ಕಾರವಾರ ಜಿಲ್ಲೆಗಳಿಂದ ಗೋವಾಕ್ಕೆ ತೆರಳುವ, ಗೋವಾದಿಂದ ರಾಜ್ಯಕ್ಕೆ ಬರುವ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹುಬ್ಬಳ್ಳಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಯತ್ನ, ಬಸ್ ಗಳ ಗಾಳಿ ಬಿಟ್ಟು ಬಸ್ ತಡೆದು ಹೋರಾಟ ಮಾಡಿದರು. ಹೋಟೆಲ್ ಗಳಿಗೆ ಮುತ್ತಿಗೆ ಹಾಕಿ, ತಿಂಡಿಗಳನ್ನು ಹೊರಗಿಟ್ಟು, ಸಾರ್ವಜನಿಕರಿಗೆ ವಿತರಿಸಿ ರೈತರು ಪ್ರತಿಭಟನೆ ನಡೆಸಿದರು. ಒಂದೆಡೆ ರೈತ ಮುಖಂಡರು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಕೇಂದ್ರ ಕಚೇರಿ ಮತ್ತು ಮತ್ತಿತರೆಡೆ ಈಗಾಗಲೇ ಹೋರಾಟ ಆರಂಭಿಸಿದರೆ ಇನ್ನೊಂದೆಡೆ ಉತ್ತರ ಕರ್ನಾಟಕ, ಗದಗ , ಧಾರವಾಡ, ಹಾವೇರಿ, ಬಾಗಲಕೋಟೆ, ಬೆಳಗಾವಿ ಮತ್ತಿತರೆ ಜಿಲ್ಲೆಗಳಲ್ಲಿ ನಸುಕಿನಿಂದಲೇ ರಸ್ತೆಗಿಳಿದು ರೈತರು ಪ್ರತಿಭಟನೆ ಆರಂಭಿಸಿದ್ದಾರೆ.


Edited By

Shruthi G

Reported By

Madhu shree

Comments