ಸಿಎಂ ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್‌ ಸಿಡಿಸಿದ ಜೆಡಿಎಸ್ ಅಭ್ಯರ್ಥಿ ಎಚ್.ವಿಶ್ವನಾಥ್

22 Dec 2017 3:19 PM | Politics
8165 Report

ಸಿಎಂ ಸ್ವಕ್ಷೇತ್ರ ವರುಣಾದ ಹಿಮ್ಮಾವು ಬಳಿ 821 ಎಕರೆ ಭೂಮಿಯನ್ನ ಸತ್ತವರ ಹೆಸರಿಗೆ ಖಾತೆ ಮಾಡಿಸಿ ಕೋಟ್ಯಾಂತರ ರೂ. ಹಣವನ್ನ ರೈತರಿಗೆ ವಂಚಿಸಿದ್ದು, ಇದಕ್ಕೆ ಸಿಎಂ ಆಶೀರ್ವಾದವಿದೆ ಎಂದು ಮಾಜಿ ಸಂಸದ ಎಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದರು.

ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಜಿ.ಟಿ ದೇವೇಗೌಡರ ವಿರುದ್ಧದ ಕೆ.ಹೆಚ್.ಬಿ ಭೂಗಹರಣವನ್ನ ಸಿಎಂ ಸಿದ್ದರಾಮಯ್ಯ ಎಸಿಬಿಗೆ  ವರ್ಗಾವಣೆ ಮಾಡುವ ಮೂಲಕ ಎಸಿಬಿಯನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು. ಕಾನೂನಿನ ಪ್ರಕಾರ ತನಿಖೆ ನಡೆಯಲಿ. ತನಿಖೆಗೆ ನಾವು ಎಲ್ಲಾ ರೀತಿಯ ಸಹಾಯ ನೀಡುತ್ತೇವೆ. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷಯಾಗಲಿ. ಆದರೆ ಸಿಎಂ ಸಿದ್ದರಾಮಯ್ಯ ಕೆ.ಎಚ್.ಬಿ ಭೂಗಹರಣದ ಕೇಸನ್ನ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ಎರಡು ರಾಷ್ಟ್ರೀಯ ಪಕ್ಷಗಳು ಜನವಿರೋಧಿ ಹಾಗೂ ಜಾತ್ಯಾತೀತ ವಾದದ ವಿರೋಧಿಗಳಾಗಿದ್ದಾರೆ. ಕೆ.ಎಚ್.ಬಿ ಪ್ರಕರಣ ಹಾಗೂ ಹಿಮ್ಮಾವು ಭೂ ಸ್ವಾಧೀನ ಪ್ರಕರಣ ಸಂಬಂಧ ಜೆಡಿಎಸ್‌ನಿಂದ ಕಾನೂನು ಹೋರಾಟ ಮುಂದುವರೆಯುತ್ತದೆ ಎಂದು ಅವರು ತಿಳಿಸಿದರು.

ಸಿಎಂ ಮೈಸೂರಿನ ಮಠವೊಂದಕ್ಕೆ ಸೇರಿದ ಜಾಗ ಕೂಡ ಬಿಟ್ಟಿಲ್ಲ, ನಿಮ್ಮ ಕ್ಷೇತ್ರದ ಮುನ್ನೂರು ರೈತರು ಇಂದಿಗೂ ಕೋರ್ಟ್ ಕಚೇರಿ ಅಲೆಯುತ್ತಿದ್ದಾರೆ. ಕೆಹೆಚ್‌ಬಿ ಪ್ರಕರಣದಲ್ಲಿ ಪಾಪ ಜಿ ಟಿ ದೇವೇಡರ ಮಗನನ್ನ ಸೇರಿಸಿದ್ದಾರೆ. ಆದ್ರೆ ಹಿಮ್ಮಾವು ಭೂಮಿ ಅಕ್ರಮದಲ್ಲಿ ಭಾಗಿಯಾಗಿದ್ದ ರಮೇಶ್ ಬಾಬು ಅನ್ನೊ ಮನುಷ್ಯನಿಗೆ ಪ್ರಮೋಷನ್ ಕೊಟ್ಟು ಮೈಸೂರು ತಹಶಿಲ್ದಾರ್ ಮಾಡಿದ್ದಾರೆ. ಭ್ರಷ್ಟ ಅಧಿಕಾರಿಗಳಿಗೆ ಸಿದ್ದರಾಮಯ್ಯ ಆಶ್ರಯ ಕೊಟ್ಟಿದ್ದಾರೆ. ನಿಮ್ಮ ಈ ನಡೆ ಜಿ ಟಿ ದೇವೇಗೌಡರಿಗೆ ಪ್ಲಸ್ ಪಾಯಿಂಟ್‌ ಆಗಲಿದೆ. ನಿಮಗೆ ಮೈನಸ್ ಆಗಲಿದೆ ಎಂದು ವಿಶ್ವನಾಥ್‌ ಹೇಳಿದರು.

ಕ್ಷೇತ್ರದಲ್ಲಿ ಜೆಡಿಎಸ್‌ಗೆ ಮತ್ತಷ್ಟು ಶಕ್ತಿ ಬಂದಿದೆ. ಕೆ.ಎಚ್.ಬಿ ಭೂ ಹಗರಣದಲ್ಲಿ ಜಿ.ಟಿ.ದೇವೇಗೌಡರ ಹೆಸರು ನೇರವಾಗಿ ಕೇಳಿ ಬಂದಿಲ್ಲವೆಂದು ಜಿ.ಟಿ.ಡಿ ಪರ ಬ್ಯಾಟಿಂಗ್ ಮಾಡಿದರು.ಸಿದ್ದರಾಮಯ್ಯ ಎಸಿಬಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದೊಡನೆ ಎಸಿಬಿಯನ್ನು ಕಿತ್ತೊಗೆಯುತ್ತೇವೆ. ಸೋಲಿನ ಭಯದಿಂದ ಸಿಎಂ ಎಸಿಬಿಯನ್ನ ಎದುರಾಳಿ ವಿರುದ್ಧ ಬಳಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಎಲ್ಲಿಂದಲೂ ಸ್ಪರ್ಧಿಸುವುದಿಲ್ಲ. ಆದ್ರೆ ಅವರ ಪುತ್ರ ಯತೀಂದ್ರ ರನ್ನು ವರುಣಾ ಕ್ಷೇತ್ರದಲ್ಲಿ ನಿಲ್ಲಿಸ್ತಾರೆ. ಸಿದ್ದರಾಮಯ್ಯ ರಾಜ್ಯದಲ್ಲಿ ಎಲ್ಲರನ್ನು ಗೆಲ್ಲಿಸ್ತೇನೆ ಅಂತಾ ಹೆಲಿಕಾಪ್ಟರ್ ಹತ್ತುತ್ತಾರೆ ಅಷ್ಟೇ ಎಂದು ನಗೆ ಚಟಾಕಿ ಹಾರಿಸಿದರು. 

Edited By

Shruthi G

Reported By

Shruthi G

Comments