ನೀಚ ಮಾತು... ಹಲವಾರು ವಿವಾದಗಳು

15 Dec 2017 7:21 PM | Politics
290 Report

2017ರಲ್ಲಿ ಗುಜುರಾತ್ ಚುನಾವಣೆ ಪ್ರಚಾರ ಹಲವು ವಿವಾದಗಳನ್ನೇ ಸೃಷ್ಠಿ ಮಾಡಿತು. ಅಂಥ ವಿವಾದಗಳು ವಿಶೇಷ ಪಡೆದುಕೊಂಡವು. ಹಲವು ವಿವಾದಗಳನ್ನು ಹಲವು ವ್ಯಕ್ತಿಗಳು ಮೈಮೇಲೆ ಎಳೆದುಕೊಂಡರು.

ಗುಜುರಾತ್ ಮೊದಲ ಹಂತದ ಮತದಾನಕ್ಕೆ ಎರಡು ದಿನ ಉಳಿದಿದ್ದಾಗ ಕಾಂಗ್ರೆಸ್ ಮುಖಂಡ ಮಣಿಶಂಕರ ಅಯ್ಯರ್ ಅವರು ಪ್ರಧಾನಿ ಮೋದಿಯನ್ನು ನೀಚ ಮನುಷ್ಯ ಎಂದು ಕರೆದರು, ಇದು ಮೋದಿ ಜಾತಿಯನ್ನು ಹೀಯಾಳಿಸಲಾಯಿತು ಎಂದು ಕರೆಯಲಾಯಿತು.ರಾಹುಲ್ ಗಾಂಧಿ: ರಾಹುಲ್ ಗಾಂಧಿಯ ಧರ್ಮ ಹೆಚ್ಚಾಗಿ ವಿವಾದಕ್ಕೊಳಗಾಯಿತು.

ಚುನಾವಣಾ ಸಂದರ್ಭಗಳಲ್ಲಿ ಗುಜುರಾತ್ ನ ಹಲವು ದೇವಾಲಯಗಳಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದರು. ಹಾಗೇ ರಾಹುಲ್ ಗಾಂಧಿ ದೇವಾಲಯಗಳಿಗೆ ಅಲೆದ ಸಂದರ್ಭದಲ್ಲಿ ವಿಪಕ್ಷಗಳ ನಾಯಕರ ಮಾತಿಗೆ ಆಹಾರವಾದರು. ಧರ್ಮದ ಥಳಕು ಇವರ ಹೆಸರಿಗೆ ಸುತ್ತಿಕೊಂಡಿತು. ರಾಹುಲ್ ಹೆಸರನ್ನು 'ಹಿಂದೂಯೇತರ' ವಿಭಾಗದಲ್ಲಿ ದಾಖಲಿಸಿದ್ದು, ವಿವಾದ ಸೃಷ್ಟಿಸಿತು.

ಪಟೇಲ್ ವಿಡಿಯೋ: ಪಾಟೀದಾರ್ ಸಮುದಾಯದ ಯುವ ಮುಖಂಡ ಹಾರ್ದಿಕ್ ಪಟೇಲ್ ರೂಮಿನಲ್ಲಿ ಮಹಿಳೆಯೊಂದಿಗೆ ಸರಸವಾಡುತ್ತಿದ್ದ ದೃಶ್ಯವಿದ್ದ ಸಿಡಿಗಳನ್ನು ಒಂದು ಟಿವಿ ಚಾನೆಲ್ ಪ್ರಸಾರ ಮಾಡಿತು. ಬಿಜೆಪಿ ತನ್ನ ಮೇಲ ಗೂಢಚಾರಿಕೆ ನಡೆಸುತ್ತಿದೆ. ನನ್ನ ಚಾರಿತ್ಯ್ರ ಹರಣ ಮಾಡುತ್ತಿದೆ ಎಂದು ಹಾರ್ದಿಕ್ ಆರೋಪಿಸಿದರು.

ಚಾಯ್ ವಾಲಾ: ಯುವ ಕಾಂಗ್ರೆಸ್ ಹರಿಬಿಟ್ಟ ಒಂದು ಮೆಮೆಯಲ್ಲಿ ಮೋದಿಯವರನ್ನು ತೆರಸಾ ಮೇ ನೀವು ಚಾಯ್ ತನ್ನಿ ಎಂದು ಹೇಳುತ್ತಿದ್ದಂತೆ ಚಿತ್ರಿಸಲಾಗಿತ್ತು. ಇದಕ್ಕೆ ಉತ್ತರವಾಗಿ ಮೋದಿ ನಾನು ಚಾಯ್ ವಾಲಾ, ನಾನು ಟೀ ಮಾರುತ್ತೇನೆ, ಆದರೆ ದೇಶವನ್ನಲ್ಲ ಎಂದು ಮೋದಿ ಹೇಳಿದರು.

Edited By

Shruthi G

Reported By

Sudha Ujja

Comments