ಗೆಲುವೋ ಸೋಲೋ ನಾವಂತು 224 ಕ್ಷೇತ್ರದಲ್ಲೂ ಹೋರಾಟ ನಡೆಸುತ್ತೇವೆ : ಎಚ್ ಡಿಡಿ

15 Dec 2017 3:13 PM | Politics
259 Report

ನಿಮ್ಮ ಗೆಲುವಿನಲ್ಲಿ ನಮ್ಮ ಪಾತ್ರವೂ ಇಲ್ಲವೇ ಎಂದು ಕಾಂಗ್ರೆಸ್ ಕಾಲೆಳೆದ ದೇವೇಗೌಡರು, ನಾವು ಸ್ಪರ್ಧಿಸಿದ್ದರೆ ನೀವೆಲ್ಲಿ ಗೆಲುವು ಕಾಣುತ್ತಿದ್ದಿರಿ ಎಂದು ಮುಖ್ಯಮಂತ್ರಿ ಅವರನ್ನು ಕುಟುಕಿದರು. ಅತ್ಯುತ್ತಮ ಮಂತ್ರಿಯಾಗಿದ್ದ ವಿ.ಶ್ರೀನಿವಾಸ ಪ್ರಸಾದ್ರನ್ನು ಷಡ್ಯಂತರದ ಮೂಲಕ ಅವಮಾನ ಮಾಡಿ ಹೊರ ಕಳಿಸಿದವರು ನೀವೇ ತಾನೇ. ಗೆಲುವೋ ಸೋಲೋ ನಾವಂತು ಈ ಬಾರಿ 224 ಕ್ಷೇತ್ರದಲ್ಲೂ ಹೋರಾಟ ನಡೆಸುತ್ತೇವೆಂದು ತಿಳಿಸಿದರು.

ನಿಮ್ಮ ಗೆಲುವಿನಲ್ಲಿ ನಮ್ಮ ಪಾತ್ರವೂ ಇಲ್ಲವೇ ಎಂದು ಕಾಂಗ್ರೆಸ್ ಕಾಲೆಳೆದ ದೇವೇಗೌಡರು, ನಾವು ಸ್ಪರ್ಧಿಸಿದ್ದರೆ ನೀವೆಲ್ಲಿ ಗೆಲುವು ಕಾಣುತ್ತಿದ್ದಿರಿ ಎಂದು ಮುಖ್ಯಮಂತ್ರಿ ಅವರನ್ನು ಕುಟುಕಿದರು. ಅತ್ಯುತ್ತಮ ಮಂತ್ರಿಯಾಗಿದ್ದ ವಿ.ಶ್ರೀನಿವಾಸ ಪ್ರಸಾದ್ರನ್ನು ಷಡ್ಯಂತರದ ಮೂಲಕ ಅವಮಾನ ಮಾಡಿ ಹೊರ ಕಳಿಸಿದವರು ನೀವೇ ತಾನೇ. ನಂತರ ಅವರ ಸೋಲಿಗೂ ಕಾರಣರಾಗಿ ಅವರನ್ನು ಅವಮಾನ ಮಾಡಿದ್ದೀರಿ. ಬಿಜೆಪಿ ಗೆಲ್ಲಬಾರದು ಎಂಬ ಏಕೈಕ ಉದ್ದೇಶದಿಂದ, ಹಣದ ಪ್ರವಾಹದ ವಿರುದ್ಧ ಸೆಣಸಾಟ ಬೇಡ ಎಂದು ನಾವು ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲಿಲ್ಲ ಎಂದು ಹೇಳಿದರು.

3 ಪಕ್ಷಗಳ ಆಡಳಿತದ ಕುರಿತು ಚರ್ಚೆಯಾಗಲಿ:  ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿಸುವುದು ನನ್ನ ಗುರಿ ಅಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ನಡೆಸಿದ 20 ತಿಂಗಳಿನ ಆಡಳಿತ, ಬಿಜೆಪಿ-ಕಾಂಗ್ರೆಸ್ನ 9 ವರ್ಷದ ಆಡಳಿತದ ವೈಖರಿ ಕುರಿತು ರಾಜ್ಯಾದ್ಯಂತ  ಚರ್ಚೆಯಾಗಬೇಕು. ಇದಾದ ನಂತರ ಮಹಾ ಜನತೆ ತೀರ್ಪು ನೀಡಬೇಕು ಎಂಬುದೇ ತಮ್ಮ ಹೆಬ್ಬಯಕೆ ಎಂದರು. ಕಾರ್ಯಕರ್ತರ ಸಭೆಯನ್ನು ಅಚ್ಚುಕಟ್ಟಾಗಿ ರೂಪಿಸಿ ಚುನಾವಣೆ ಹುರಿಯಾಳುಗಳು ಸಿದ್ಧವಾಗಿ ನಿಂತಿದ್ದ ಆಕಾಂಕ್ಷಿಗಳ ಮೂಗಿಗೆ ದೇವೇಗೌಡರು ತುಪ್ಪ ಸವರಿ ಅವರ ಆಸೆ ಜೀವಂತವಾಗಿರಿಸಿದರು. ನಂಜನಗೂಡಿನ ಆಕಾಂಕ್ಷಿಗಳಾದ ಶಿವಕುಮಾರ, ಸೋಮಸುಂದರ್, ವರುಣಾದ ಅಭಿಷೇಕಗೌಡರು ತಮ್ಮ ಹೆಸರನ್ನು ಹೇಳಬಹುದು ಎಂದು ಕಾದಿದ್ದರು. ಈ ಕುರಿತು ಪ್ರಸ್ತಾಪಿಸಿದ ಗೌಡರು, ಅಭ್ಯರ್ಥಿಯ ಆಯ್ಕೆ ಈಗಲ್ಲ. ಅದಕ್ಕೆ ಸಮಿತಿ ಇದೆ, ಅಲ್ಲಿ ಚರ್ಚೆಯಾಗಬೇಕು ಎಂದು ಹೇಳಿ ಸುಮ್ಮನಾದರು.

Edited By

Hema Latha

Reported By

Madhu shree

Comments