ದೇವೇಗೌಡರ ಕುಟುಂಬದಿಂದ ನಾಲ್ವರು ಕಣಕ್ಕೆ..!!

12 Dec 2017 9:27 AM | Politics
393 Report

ವಿಧಾನಸಭೆ ಚುನಾವಣೆ ಆರಂಭಕ್ಕೂ ಮುನ್ನವೇ ಜೆಡಿಎಸ್​ನಲ್ಲಿ ಗೌಡರ ಕುಟುಂಬದಿಂದ ನಾಲ್ವರು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಎಚ್​.ಡಿ ಕುಮಾರಸ್ವಾಮಿ, ರೇವಣ್ಣ, ಅನಿತಾ ಕುಮಾರಸ್ವಾಮಿ ಪ್ರಜ್ವಲ್​ ರೇವಣ್ಣ ಕೂಡ ಸ್ಪರ್ಧಿಸಲಿದ್ದಾರೆ ಎಂಬುದುವುದು ಬಹುತೇಕ ಖಚಿತವಾಗಿದೆ. ಗೌಡರ ಕುಟುಂಬದಲ್ಲಿ ಎಷ್ಟು ಜನ ಸ್ಪರ್ಧಿಸುತ್ತಾರೆ ಎಂಬುದರ ಕುರಿತು ತೀವ್ರ ಕುತೂಹಲವಿತ್ತು. ಅಲ್ಲದೇ ಗೌಡರ ಕುಟುಂಬದಲ್ಲಿ ಹೆಚ್ಚು ಮುಖಂಡರು ಚುನಾವಣೆಗೆ ಸ್ಪರ್ಧಿಸುವುದರಿಂದ ಕುಟುಂಬ ರಾಜಕಾರಣ ಎಂಬ ಅಪವಾದಕ್ಕೆ ಗುರಿಯಾಗುವ ಭೀತಿಯ ಮಧ್ಯೆಯೂ ನಾಲ್ವರು ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ಇನ್ನು ಈ ನಿರ್ಧಾರ ಗೌಡ ಕುಟುಂಬದಲ್ಲಿ ಕಲಹಕ್ಕೂ ಕಾರಣವಾಗಲಿದೆಯೇ ಎಂಬ ಅನುಮಾನ ಮೂಡಿದೆ. ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದಾದರೇ ನಾನು ಸ್ಪರ್ಧಿಸುತ್ತೇನೆ ಎಂದು ಭವಾನಿ ರೇವಣ್ಣ ಬೇಡಿಕೆ ಇಡುವ ಲಕ್ಷಣಗಳಿವೆ. 

Edited By

Shruthi G

Reported By

Shruthi G

Comments