ನನ್ನ ಜೀವವಿರುವವರೆಗೆ ಅಲ್ಪಸಂಖ್ಯಾತರ ಪರ ಹೋರಾಟ ನಡೆಸುತ್ತೇನೆ : ಎಚ್ ಡಿಡಿ

11 Dec 2017 12:03 PM | Politics
352 Report

ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ವಿವಾದವನ್ನು ಜೀವಂತವಾಗಿಡುವ ಸಲುವಾಗಿ ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿದರು. ಅಧಿಕಾರ ಹೋಗಿರಬಹುದು ಆದರೆ ನನ್ನ ಜೀವವಿರುವವರೆಗೆ ಅಲ್ಪಸಂಖ್ಯಾತರ ಪರವಾಗಿ ಹೋರಾಟ ಮುಂದುವರಿಸುತ್ತೇನೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಹುಬ್ಬಳಿ ಈದ್ಗಾ ಮೈದಾನದ ವಿವಾದವನ್ನು ಬಗೆಹರಿಸುವ ಮೂಲಕ ರಾಜ್ಯದಲ್ಲಿ ಮುಸ್ಲಿಮರು ನೆಮ್ಮದಿಯಿಂದ ಬದುಕುವಂತೆ ಮಾಡಿದ್ದೇನೆ. ಅಲ್ಲದೆ ನಾನು ಪ್ರಧಾನಿಯಾಗಿದ್ದ 11 ತಿಂಗಳು ಜಮ್ಮು ಕಾಶ್ಮೀರದಲ್ಲಿ ಯಾವುದೇ ದಾಳಿಯಾಗದಂತೆ ನೋಡಿಕೊಂಡಿದ್ದೇನೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಮುಖಂಡರಾದ ಸೈಯದ್ ಮುಹಮ್ಮದ್ ಅಲ್ತಾಫ್,ಅಬ್ದುರ್ರವೂಫ್ ಪುತ್ತಿಗೆ, ವಿಶ್ವನಾಥ್, ಬಂಡೆಪ್ಪ ಕಾಶ್ಯಂಪೂರ್,ಜಿಲ್ಲಾಧ್ಯಕ್ಷ ಸಿ.ಚನ್ನಿಗಪ್ಪ,ಶಾಸಕರಾದ ಎಸ್.ಸುರೇಶ್‌ಬಾಬು, ಎಸ್.ಆರ್.ಶ್ರೀನಿವಾಸ್, ಎಂ.ಟಿ.ಕೃಷ್ಣಪ್ಪ, ಡಿ.ನಾಗರಾಜಯ್ಯ, ಸುಧಾಕರ್‌ಲಾಲ್, ಕೆ.ಎಂ.ತಿಮ್ಮರಾಯಪ್ಪ, ಡಿ.ಸಿ.ಗೌರಿಶಂಕರ್, ಗೋವಿಂದರಾಜು, ನರಸೇಗೌಡ, ತುಮಕೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಕ್ಬಾಲ್ ಅಹ್ಮದ್, ಕಾರ್ಯದರ್ಶಿ ಡಾ.ಇಮ್ತಿಯಾಝ್ ಅಹ್ಮದ್ ಹಾಗೂ ಮತ್ತಿತರ ಮುಖಂಡರು ವೇದಿಕೆಯಲ್ಲಿದ್ದರು.

Edited By

Hema Latha

Reported By

Madhu shree

Comments