ಜೆಡಿಎಸ್ ನಂತಹ ಪಕ್ಷಗಳೇ ಜಾತ್ಯಾತೀತ ಶಕ್ತಿ ಬಲಪಡಿಸಲು ಪ್ರಯತ್ನಿಸುತ್ತಿವೆ

11 Dec 2017 11:26 AM | Politics
294 Report

'ಮಂದಿರ, ಮಸೀದಿ ಹೆಸರಲ್ಲಿ ರಾಷ್ಟ್ರೀಯ ಪಕ್ಷಗಳು ದೇಶದ ಜನರಲ್ಲಿ ಒಡಕಿನ ಭಾವನೆ ಬಿತ್ತುತ್ತಿವೆ. ಜೆಡಿಎಸ್ ನಂತಹ ಪಕ್ಷಗಳೇ ಜಾತ್ಯಾತೀತ ಶಕ್ತಿ ಬಲಪಡಿಸಲು ಪ್ರಯತ್ನಿಸುತ್ತಿವೆ.ನಿಮ್ಮ ನಿಲುವು ಜಾತ್ಯಾತೀತತೆಯ ಪರವಾಗಿಯೇ ಇರಬೇಕು' ಎಂದು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದರು.

‘ಮಹಾತ್ಮ ಗಾಂಧೀಜಿ ಕೊಂದವರಿಗೆ ಈಗ ಗುಡಿ ಕಟ್ಟುತ್ತಿದ್ದಾರೆ?  ದೇಶದ ಜನರಿಗೆ ಏನು ಸಂದೇಶ ಹೋಗುತ್ತದೆ ಎಂಬುದು ಗೊತ್ತಿಲ್ಲ’ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದರು. ತುಮಕೂರಿನಲ್ಲಿ ನೆಡೆದ ಜೆಡಿಎಸ್ ರಾಜ್ಯಮಟ್ಟದ ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಈ ದೇಶದಲ್ಲಿ ಜಾತ್ಯಾತೀತ ಶಕ್ತಿ, ಗಾಂಧೀಜಿಯ ಬಗ್ಗೆ ಗೊತ್ತಿದೆ. ಇಂತಹ ಪ್ರಯತ್ನಗಳಿಂದ ಏನೂ ಸಾಧನೆ ಮಾಡಿದಂತಾಗುವುದಿಲ್ಲ. ಹಿಂದೂಸ್ತಾನ್ ಎಲ್ಲರ ಹಿಂದೂಸ್ತಾನ್. ಅಲ್ಪಸಂಖ್ಯಾತರೇ ಇರಲಿ, ಯಾರೇ ಇರಲಿ. ಇಲ್ಲಿ ಎಲ್ಲರೂ ಒಂದೇ’ ಎಂದರು.

ಮತದ ತಾಕತ್ತು ತಿಳಿಯಿರಿ: ‘ನಿಮ್ಮ ಮತದ ಮಹತ್ವ, ತಾಕತ್ತು ತಿಳಿದುಕೊಳ್ಳಿ. ಮತ ಎಂಬುದು ನಿಮಗೆ ಸುಮ್ಮನೆ ದಕ್ಕಿದ್ದಲ್ಲ. ಸ್ವಾತಂತ್ರ್ಯಕ್ಕೆ ಹೋರಾಟಗಾರರು, ದೇಶದ ಏಕತೆ ಬಯಸಿದವರು ರಕ್ತ ಸುರಿಸಿ ಗಳಿಸಿಕೊಟ್ಟಿರುವಂಥದ್ದು. ನೀವು ಮತ ಹಾಕುವ ಮುನ್ನ ಒಮ್ಮೆ ಇದನ್ನು ನೆನಪಿಸಿಕೊಳ್ಳಿ. ಒಬ್ಬರಿಗೆ ಒಂದೇ ಮತ. ಮುಂದಿನ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಚಲಾಯಿಸಿ’ ಎಂದು ಮನವಿ ಮಾಡಿದರು. 'ಮಹಾತ್ಮ ಗಾಂಧೀಜಿ, ಮೌಲಾನಾ ಆಜಾದ್ ಅವರು ಕಂಡ ಜಾತ್ಯಾತೀತ ರಾಷ್ಟ್ರ ರಕ್ಷಿಸಿ' ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅಲ್ಪಸಂಖ್ಯಾತರಿಗೆ ಕರೆ ನೀಡಿದರು.

 

 

Edited By

Hema Latha

Reported By

Madhu shree

Comments