ಮುಖ್ಯಮಂತ್ರಿ ಆಗಿರುವ ನನಗೆ 'ಅಭಿವೃದ್ಧಿ ಕಾರ್ಯಗಳ' ಬಗ್ಗೆ ಆಶ್ಚರ್ಯವಾಗುತ್ತದೆ, ಸಿಎಂ

08 Dec 2017 11:34 AM | Politics
216 Report

ಉತ್ತರಕನ್ನಡ: ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಜನವರಿಗೆ ಮನವರಿಕೆ ಮಾಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಅಭಿವೃದ್ಧಿಯ ಪರ್ವ ವಾಗಿದ್ದು, ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿ ಕಾಳಿ ನದಿಯಿಂದ 46 ಕೆರೆಗಳು ಹಾಗೂ 19 ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ವಿವಿಧ 94 ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬಂಡವಾಳ ಹೂಡಿಕೆಯಲ್ಲಿ 11ನೇ ಸ್ಥಾನದಲ್ಲಿರುವ ಕರ್ನಾಟಕ, ಸಚಿವ ದೇಶಪಾಂಡೆ ಅವರ ಪ್ರಯತ್ನದಿಂದಾಗಿಯೇ ಇಂದು ಮೊದಲ ಸ್ಥಾನಕ್ಕೇರಿದೆ. ಕೈಗಾರಿಕಾ ರಂಗದಲ್ಲಿ 14 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಠಿ ಮಾಡಲಾಗಿದೆ. ಹಳಿಯಾಳ ಪಟ್ಟಣದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ ನೋಡಿದ್ರೆ ಸಿಎಂ ಆಗಿರುವ ನನಗೂ ಸಹ ನನ್ನ ಕ್ಷೇತ್ರದಲ್ಲಿ ಇಷ್ಟು ಕೆಲಸ ಮಾಡಲಾಗಿಲ್ಲವಲ್ಲ ಎಂದು ಆಶ್ಚರ್ಯವಾಗುತ್ತದೆ ಎಂದರು. ಕಾಳಿ ನದಿಯಿಂದ ನೀರಾವರಿ ಸೌಲಭ್ಯ, ಅನುಷ್ಟಾನಗೊಳಿಸಲಾಗಿದ್ದು, ಸಾಮಾನ್ಯ ಸಾಧನೆಯಲ್ಲ, ಬರುವ ಮುಂಬರುವ ದಿನಗಳಲ್ಲಿ 15 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ತಾಲ್ಲೂಕು ಪುನರ್ವಿಂಗಡಣೆ ಕುರಿತು ರಚಿಸಲಾಗಿದ್ದ ಯಾವ ಸಮಿತಿಯೂ ಸಹ ಶಿಫಾರಸ್ಸು ಮಾಡಿರದ ದಾಂಡೇಲಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿಸುವಲ್ಲಿ ಅವರು ಶ್ರಮಿಸಿದ್ದಾರೆ ಎಂದು ತಿಳಿಸಿದರು.

 

 

 

 

 

 

Edited By

Hema Latha

Reported By

Sudha Ujja

Comments