ಪಂಜಾಬ್ ನ ರೈತರು ಈಗಲೂ ದೇವೇಗೌಡರನ್ನು ನೆನೆಪಿಸಿಕೊಳ್ತಾರೆ..!!

06 Dec 2017 11:02 AM | Politics
300 Report

1997, ದೇವೇಗೌಡರು ಪ್ರಧಾನಿಯಾಗಿದ್ದ ಸಮಯ ,ಪಂಜಾಬಿನಲ್ಲಿ ರೈತರು ಯಥೇಚ್ಚವಾಗಿ ಭತ್ತ ಬೆಳೆದ ಪರಿಣಾಮ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತಾಯಿತು. ರೈತರಿಂದ ಭತ್ತ ಖರೀದಿಸಲು ಯಾರೂ ಮುಂದೆ ಬರಲಿಲ್ಲ, ಜೊತೆಗೆ ರೈತರಿಗೆ ಆಸರೆಯಾಗಬೇಕಿದ್ದ ಅಲ್ಲಿನ ಸ್ಥಳೀಯ ಪಂಜಾಬ್ ಸರಕಾರವೂ ರೈತರಿಗೆ ಸಹಾಯ ಮಾಡಲಿಲ್ಲ.

ಆಗ ಪ್ರಧಾನಿಯಾಗಿದ್ದ ದೇವೇಗೌಡರು ಹೇಗೋ ವಿಚಾರ ತಿಳಿದುಕೊಂಡು, ರೈತರು ಬೆಳೆದ ಅದೇಷ್ಟೇ ಭತ್ತವಿದ್ದರೂ ಆ ಎಲ್ಲಾ ಭತ್ತವನ್ನು ರೈತರಿಂದ ಖರೀದಿಸಲು ಖಡಕ್ ಆದೇಶ ನೀಡುವ ಮೂಲಕ “ಮಣ್ಣಿನ ಮಗ” ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ದೇವೇಗೌಡರ ಈ ಸಹಾಯವನ್ನು ಪಂಜಾಬಿನ ರೈತರು ಮರೆಯಲಿಲ್ಲ, ತಾವು ಬೆಳೆಯುವ ಭತ್ತದ ತಳಿಯೊಂದಕ್ಕೆ ದೇವೇಗೌಡ ಎಂದು ನಾಮಕರಣ ಮಾಡುವ ಮೂಲಕ ದೇವೇಗೌಡರನ್ನು ಸದಾ ನೆನಪಿಸಿಕೊಳ್ಳುತ್ತಾರೆ.

 

Edited By

Hema Latha

Reported By

Madhu shree

Comments