ಲೋಕಸಭೆಗಿಲ್ಲ, ಅಸೆಂಬ್ಲಿಗೆ ಮಾತ್ರ ಸ್ಪರ್ಧೆ : ಪ್ರಜ್ವಲ್ ರೇವಣ್ಣ

06 Dec 2017 9:47 AM | Politics
507 Report

ನನಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯಿಲ್ಲ, ಪಕ್ಷದ ಹಿರಿಯರು ಸೂಚನೆ ನೀಡಿದರೆ ಮಾತ್ರ ವಿಧಾನ ಸಭೆಗೆ ಸ್ಪರ್ಧಿಸುತ್ತೇನೆ ಎಂದು ತಿಳಿಸಿದರು.

ಇಲ್ಲದಿದ್ದರೆ ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಳ್ಳುತ್ತೇನೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ. ಸಿಂಧನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜಕೀಯ ಜೀವನದಲ್ಲಿ ಜನರಿಂದ ಮುಂದೆ ಬರುತ್ತೇನೆಯೇ ಹೊರತು ಹಿಂಬಾಗಿಲಿನಿಂದ ರಾಜಕಾರಣ ಮಾಡುವುದಿಲ್ಲ. ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.

Edited By

Shruthi G

Reported By

Shruthi G

Comments