ತಮಿಳು ರಾಜಕೀಯದಲ್ಲಿ ಹೊಸ ಟ್ವಿಸ್ಟ್ ನೀಡಲು ಮುಂದಾದ ನಟ ವಿಶಾಲ್

04 Dec 2017 3:30 PM | Politics
232 Report

ನಟ ವಿಶಾಲ್ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿಲ್ಲವಂತೆ. ಜನರ ನಾಯಕನಾಗಲು ಬಯಸಿದ್ದೇನೆ. ಅವರ ಧ್ವನಿಯಾಗಲು ಬಯಸಿದ್ದೇನೆ. ಹಾಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ರಾಜಕೀಯದಲ್ಲಿ ಬಹುಕಾಲ ಇರಬೇಕೆಂಬ ಉದ್ದೇಶ ನನ್ನದಲ್ಲ ಎಂದು ವಿಶಾಲ್ ಹೇಳಿದ್ದಾರೆ.

ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರಿಂದ ಪ್ರಭಾವಿತರಾಗಿರುವ ವಿಶಾಲ್ ರಾಜಕೀಯಕ್ಕೆ ಬರುವ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಚುನಾವಣೆಗೆ ಧುಮುಕುವುದಾಗಿ ವಿಶಾಲ್ ಹೇಳಿಕೆ ನೀಡಿದ್ದಾರೆ. ವಿಶಾಲ್ ಹೇಳಿಕೆ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಜಯಲಲಿತಾ ವಿಧಾನ ಸಭಾ ಕ್ಷೇತ್ರದಿಂದ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎರಡೂ ಸ್ಪರ್ಧೆಗಿಳಿಯಲಿದೆ. ಇ.ಮಧುಸೂಧನ್ ಹಾಗೂ ಟಿಟಿವಿ ದಿನಕರನ್ ನಾಮಪತ್ರ ಸಲ್ಲಿಸಿದ್ದಾರೆ. ನಟ ವಿಶಾಲ್ ನಿರ್ಧಾರಕ್ಕೆ ಚಿತ್ರತಂಡ ಬೆಂಬಲ ಸೂಚಿಸಿದೆ. ಪ್ರಕಾಶ್ ರಾಜ್, ಖುಷ್ಬು ಮತ್ತು ಆರ್ಯ ಬೆಂಬಲ ಸೂಚಿಸಿದ್ದಾರೆ. ವಿಶಾಲ್ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲಿದ್ದಾರೆ.

Edited By

Hema Latha

Reported By

Madhu shree

Comments