ರಾಜಕೀಯ ಬದಲಾವಣೆ ಕೆಲಸ ಎಲ್ಲರೂ ಸೇರಿ ಮಾಡೋಣ ಎಂದು ಉಪೇಂದ್ರ ಕರೆ

01 Dec 2017 3:10 PM | Politics
230 Report

ರಾಜರ ಆಳ್ವಿಕೆಯಿಂದ ಹೊರಬಂದು ದಶಕಗಳು ಕಳೆದಿವೆ. ಸತ್ ಪ್ರಜೆಗಳೇ ಏಳಿ, ಎದ್ದೇಳಿ, ಪ್ರಜಾಕೀಯ ಆಯಪ್ ಬಿಡುಗಡೆ ಆಗಿದೆ. ಅದನ್ನು ಡೌನ್ಲೋಡ್ ಮಾಡಿಕೊಂಡು ಬಳಸಿರಿ. ನಾಯಕರು, ನಾಯಕರಲ್ಲ. ಅವರು ಕಾರ್ಮಿಕರು. ರಾಜಕೀಯ ವ್ಯಾಪಾರ, ಕೆಸರೆರಚಾಟ ನಮಗೆ ಬೇಡ. ರಾಜಕೀಯ ಬದಲಾವಣೆ ಬರಬೇಕು, ಅದನ್ನು ತರುವ ಕೆಲಸ ಎಲ್ಲರೂ ಸೇರಿ ಮಾಡೋಣ ಎಂದು ಉಪೇಂದ್ರ ಕರೆ ನೀಡಿದರು.

ದೇಶದಲ್ಲಿ ರಾಜಕೀಯ ಮತ್ತು ಪ್ರಜಾಕೀಯ ಅನ್ನೋದು ಇರಬಾರದು. ವಿಧಾನಸೌಧ, ವಿಕಾಸಸೌಧ, ಮಕ್ಕಳ ಶಾಲೆಯಾಗಬೇಕು ಎಂದರು. ನಾನಂತೂ ಬದಲಾವಣೆ ತರಲು ಹೊರಟಿದ್ದೇನೆ. ನಾನು ಸತ್ತರೂ ಏನಾದರೊಂದು ಸಾಧಿಸಿದ್ದೇನೆ ಎಂಬ ತೃಪ್ತಿ ನನಗಿರುತ್ತದೆ ಎಂದು ಉಪೇಂದ್ರ ಇದೇ ವೇಳೆ ಮಾರ್ಮಿಕವಾಗಿ ನುಡಿದರು. ಯಾವುದೇ ಗುರಿ ಇಟ್ಟುಕೊಂಡರೆ ಅದು ನಮಗಾಗಿ ಅಲ್ಲ, ಸಮಾಜಕ್ಕಾಗಿ ಇಟ್ಟುಕೊಳ್ಳಬೇಕು. ಇಡೀ ಪ್ರಪಂಚವನ್ನೇ ಸರಿ ಮಾಡುತ್ತೇವೆ ಎನ್ನುವಂತಹ ಗುರಿ ಇರಬೇಕು. ಪ್ರಪಂಚದಲ್ಲಿ ಎಲ್ಲರನ್ನೂ ಖುಷಿಪಡಿಸುವ ಗುರಿ ನನ್ನದು. ಅದಕ್ಕಾಗಿ ಹೆಸರು, ಖ್ಯಾತಿ ಗಳಿಸಲು ಸಿನಿಮಾಕ್ಕೆ ಬಂದೆ. ಆದರೆ, ನನ್ನ ಬದುಕು ಉಪ್ಪಿಟ್ಟು ಆಗಿದೆ ಎಂದರು. 

Edited By

Hema Latha

Reported By

Madhu shree

Comments