ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಇಂದು ದೆಹಲಿಗೆ ಆಗಮನ

01 Dec 2017 10:37 AM | Politics
304 Report

ಒಬಾಮಾ ಫೌಂಡೇಶನ್ ನಲ್ಲಿ ಯುವಕರ ಜೊತೆ ಸಂವಾದ ಕಾರ್ಯಕ್ರಮಕ್ಕಾಗಿ ಅವರು ರಾಷ್ಟ್ರ ರಾಜಧಾನಿಗೆ ಬರುತ್ತಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ದೆಹಲಿ ಭೇಟಿ ಬಗ್ಗೆ ಖುದ್ದು ಒಬಾಮಾ ಟ್ವೀಟ್ ಮಾಡಿದ್ದಾರೆ. ಮಧ್ಯಾಹ್ನ 3.45ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಭಾರತದ 280 ಯುವ ನಾಯಕರ ಜೊತೆಗೆ ಒಬಾಮಾ ಸಂವಾದ ನಡೆಸಲಿದ್ದಾರೆ.

Edited By

Hema Latha

Reported By

Madhu shree

Comments