ರಘು ಸಾವಿನ ಪ್ರಕರಣದ ಬಗ್ಗೆ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ವ್ಯಂಗ್ಯ ಚಿತ್ರಕಾರ

29 Nov 2017 1:06 PM | Politics
254 Report

ಬೈಕ್ ಅಪಘಾತದಲ್ಲಿ ಮೃತಪಟ್ಟ ಟೆಕ್ಕಿ ರಘುಪತಿ ಕಂದಸ್ವಾಮಿ ಸಾವಿಗೆ ಕಾರಣ ಯಾರು ಎನ್ನುವುದನ್ನು ವ್ಯಂಗ್ಯ ಚಿತ್ರದ ಮೂಲಕ ಬಾಲಾ ಪಳನಿಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ಬಾಲಾ ತಮ್ಮ ವ್ಯಂಗ್ಯ ಚಿತ್ರದ ಮೂಲಕ ಎಐಎಡಿಎಂಕೆ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.

ಸಿಎಂ ವಿರುದ್ಧ ವ್ಯಂಗ್ಯ ಚಿತ್ರ ಬಿಡಿಸಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಬಾಲಾ ತನ್ನ ವಿರುದ್ಧ ಇನ್ನೊಂದು ಎಫ್​ಐಆರ್​ ದಾಖಲಾಗಿದೆ ಎನ್ನುವುದು ತಿಳಿಯುತ್ತಲೇ ಇನ್ನೊಂದು ಕಾರ್ಟೂನ್ ಮೂಲಕ ತನ್ನ ಅರೆಸ್ಟ್ ಹಾಗೂ ರಘು ಸಾವಿನ ವಿರುದ್ಧ ಧ್ವನಿ ಎತ್ತಿದ್ದಾರೆ. ಅಮೆರಿಕದಲ್ಲಿ ನೆಲೆಸಿದ್ದ ಸಾಫ್ಟ್ ವೇರ್ ಎಂಜಿನಿಯರ್ ರಘುಪತಿ ಕಂದಸ್ವಾಮಿ, ವಧು ವೀಕ್ಷಣೆಗಾಗಿ ತಮಿಳುನಾಡಿನ ಕೊಯಂಬತ್ತೂರಿಗೆ ಬಂದಿದ್ದರು. ಈ ವೇಳೆ ಎಐಎಡಿಎಂಕೆ ಪಕ್ಷ ಎಂಜಿಆರ್ ಶತಮಾನೋತ್ಸವ ಆಚರಣೆಗೆ ಅಕ್ರಮವಾಗಿ ಹಾಕಿದ್ದ ಹೋರ್ಡಿಂಗ್​ಗೆ ಬೈಕ್ ಡಿಕ್ಕಿಯಾಗಿ ರಘುಪತಿ ಕೆಳಕ್ಕೆ ಬಿದ್ದು, ಲಾರಿ ಹರಿದು ಮೃತಪಟ್ಟಿದ್ದರು. ಈ ಮೂಲಕ ರಘುಪತಿ ಸಾವಿನ ಬಗ್ಗೆ ಸಾಮಾಜಿಕ ತಾಣಗಳಲ್ಲಿ ‘ಹೂ ಕಿಲ್ಡ್ ರಘು’ ಅನ್ನೋ ಹೆಸರಲ್ಲಿ ಸರ್ಕಾರದ ವಿರುದ್ಧ ಅಭಿಯಾನವೇ ನಡೆಯುತ್ತಿದ್ದು, ರಘು ಸಾವನ್ನಪ್ಪಿದ ಜಾಗದಲ್ಲಿ ರಸ್ತೆಯಲ್ಲೆಲ್ಲಾ ‘ಹೂ ಕಿಲ್ಡ್ ರಘು’ ಎಂದು ಪೇಯಿಂಟಿಂಗ್ ಕಾಣಲಾರಂಭಿಸಿದೆ.

Edited By

Hema Latha

Reported By

Madhu shree

Comments