ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಕಟ್ಟುವ ಎಲ್ಲ ತಯಾರಿ ಜೋರಾಗಿದೆ

ಡಿಸೆಂಬರ್ ನಾಲ್ಕರಂದು ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಡಿಸೆಂಬರ್ ಒಂದು ಮತ್ತು ಎರಡರಂದು, ರಾಹುಲ್ ಗಾಂಧಿ ಕೇರಳಕ್ಕೆ ತೆರಳಲಿದ್ದಾರೆ. ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೇರುತ್ತಾರೆಂಬ ವಿಷಯ ಹೊಸದಲ್ಲ. ಅನೇಕ ದಿನಗಳಿಂದ ಈ ಬಗ್ಗೆ ಮಾತುಗಳು ಕೇಳಿ ಬರ್ತಿವೆ. ಆದ್ರೆ ರಾಹುಲ್ ಅಧ್ಯಕ್ಷರಾಗ್ತಿದ್ದಂತೆ ಕಾಂಗ್ರೆಸ್ ಕೆಲವೊಂದು ಬದಲಾವಣೆ ಮಾಡಲಿದೆ ಎಂಬ ಸುದ್ದಿಯಿದೆ.
ಇಬ್ಬರು ಹಿರಿಯ ನಾಯಕರು ರಾಹುಲ್ ಗಾಂಧಿಗೆ ನೆರವಾಗಲಿದ್ದಾರೆ ಎನ್ನಲಾಗ್ತಿದೆ. ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ನೀಡುವಂತೆ ಅನೇಕ ರಾಜ್ಯಗಳ ಕಾಂಗ್ರೆಸ್ ಕಾರ್ಯಕರ್ತರು ಮನವಿ ಸಲ್ಲಿಸಿದ್ದರು. ರಾಹುಲ್ ಡಿಸೆಂಬರ್ 31ರೊಳಗೆ ಅಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ರಾಹುಲ್ ಗಾಂಧಿಗೆ ಡಿಸೆಂಬರ್ 9ರಂದು ಪಟ್ಟಾಭೀಷೇಕ ನಡೆಯಲಿದೆ ಎಂದು ಆಪ್ತ ಮೂಲಗಳು ಹೇಳಿವೆ. ಇದಕ್ಕೆ ಕಾಂಗ್ರೆಸ್ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಅಧ್ಯಕ್ಷೆ ಸೋನಿಯಾ ಮೇಡಂ ಎಸ್ ಎಂದಿದ್ದಾರೆ ಎನ್ನಲಾಗ್ತಿದೆ.
Comments