ಪ್ರಜ್ವಲ್ ಪ್ರಧಾನ ಕಾರ್ಯದರ್ಶಿ ಸ್ಥಾನದ ಬಗ್ಗೆ ಎಚ್ ಡಿಕೆ ಹೇಳಿದ್ದೇನು?

28 Nov 2017 1:50 PM | Politics
8100 Report

ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಜ್ವಲ್ ರೇವಣ್ಣ ಅವರಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಇತರ ಪದಾಧಿಕಾರಿಗಳಂತೆ ಪ್ರಜ್ವಲ್ ಕೂಡ ಒಬ್ಬರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಟೌನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ದಲಿತಪರ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದಾಧಿಕಾರಿಗಳೆಲ್ಲರಿಗೂ ಟಿಕೆಟ್ ನೀಡುವ ಅರ್ಥವಲ್ಲ. ಇದರಲ್ಲಿ ಬೇರೆ ರೀತಿ ಅರ್ಥೈಸಿಕೊಳ್ಳುವುದೇನಿಲ್ಲ ಎಂದು ಹೇಳಿದ ಅವರು, ಪಕ್ಷ ಸಂಘಟನೆ ದೃಷ್ಟಿಯಿಂದ ಪ್ರಜ್ವಲ್ ರೇವಣ್ಣರನ್ನು ಪದಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಅದೇ ರೀತಿ ಪಕ್ಷದಲ್ಲಿ ಹಲವು ಪದಾಧಿಕಾರಿಗಳ ನೇಮಕವಾಗಿದೆ.ಎಲ್ಲಾ ಪದಾಧಿಕಾರಿಗಳಿಗೂ ಟಿಕೆಟ್ ಕೊಡೋಕೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷ ಸಂಘಟನೆಗೆ ಪ್ರಜ್ವಲ್ ಕಾರ್ಯನಿರ್ವಹಿಸುತ್ತಾರೆ. ನಮ್ಮ ಕುಟುಂಬದಲ್ಲಿ ಟಿಕೆಟ್ ಒಡಕು ಏರ್ಪಡೋದಿಲ್ಲ ಎಂದು ತಿಳಿಸಿದರು. ಇಷ್ಟು ದಿನ ಪಕ್ಷದಲ್ಲಿ ಪ್ರಜ್ವಲ್ ಅವರಿಗೆ ಯಾವುದೇ ಹುದ್ದೆ ನೀಡಿರಲಿಲ್ಲ. ಹೀಗಾಗಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎನ್ನಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ಗಾಗಿ ಒತ್ತಾಯಿಸಿ ಕುಮಾರಸ್ವಾಮಿಯವರ ವಿರುದ್ಧ ಇತ್ತೀಚೆಗೆ ಎರಡು ಬಾರಿ ಬಹಿರಂಗವಾಗಿ ಪ್ರಜ್ವಲ್ ಅಸಮಾಧಾನ ಹೊರಹಾಕಿದ್ದರು. ಬಳಿಕ ದೇವೇಗೌಡರ  ಸೂಚನೆ ಮೇರೆಗೆ ಅವರು ಸುಮ್ಮನಾಗಿದ್ದರು. ಪಕ್ಷ ಸಂಘಟನೆಗೆ ಪ್ರಜ್ವಲ್ ಕಾರ್ಯನಿರ್ವಹಿಸುತ್ತಾರೆ. 

Edited By

Shruthi G

Reported By

Shruthi G

Comments