ಕೈ ಮುಗಿತೀನಪ್ಪ ದಯವಿಟ್ಟು ಮಹದಾಯಿ ವಿವಾದ ಬಗೆಹರಿಸಿ : ಸಿದ್ದರಾಮಯ್ಯ ಮನವಿ

28 Nov 2017 1:14 PM | Politics
395 Report

ತಿಂಗಳಲ್ಲಿ ಕಳಸಾ ಬಂಡೂರಿ ವಿವಾದಕ್ಕೆ ಅಂತ್ಯ ಹೇಳಿ ನೀರು ಹರಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಕೈ ಮುಗಿತೀನಿ ದಯವಿಟ್ಟು ಆ ಕೆಲಸ ಮಾಡಿ ಎಂದರು. ಅಲ್ಲದೆ ಮಹದಾಯಿ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು. ಪ್ರಧಾನಿ ಮಧ್ಯಪ್ರವೇಶಿಸಿದರೆ ಮಾತ್ರ ವಿವಾದ ಅಂತ್ಯ ಹಾಡಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಮಹದಾಯಿ ವಿವಾದ ಇತ್ಯರ್ಥಕ್ಕೆ ಪ್ರಧಾನಿಗೆ ಗೋಗರೆದೆ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಿ ಮೋದಿಯಂತೆ ಯಾವ ಪ್ರಧಾನಿ ಮಾಡಲಿಲ್ಲ. ಈಗ ಚುನಾವಣೆ ಕಾಲ ಸನ್ನಿಹಿತ ವಾದ ಮೇಲೆ ಬಿಜೆಪಿಯಿಂದ ತಿಂಗಳಲ್ಲಿ ಮಹದಾಯಿ ವಿವಾದ ಇತ್ಯರ್ಥ ಮಾಡುವ ಮಾತು ಬಂದಿದೆ ಎಂದು ಸಿಎಂ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮುಂದಿನ ಆಗಸ್ಟ್ 2018 ರೊಳಗೆ ಮಹದಾಯಿ ಬಗ್ಗೆ ಟ್ರಿಬ್ಯೂನಲ್ ಅಂತಿಮ ತೀರ್ಮಾನ ಆಗಲೇಬೇಕು. ಟ್ರಿಬ್ಯೂನಲ್ ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಪ್ರಧಾನಿಗೆ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾಗೆ ಕೈಮುಗಿದು ಕೇಳಿಕೊಂಡೆ. ಬಿಎಸ್ವೈ, ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಮುಖಂಡರಿಗೆ ಪ್ರಧಾನಿ ಮೇಲೆ ಒತ್ತಡಕ್ಕೆ ಒತ್ತಾಯಿಸಿದೆ. ಈ ಗಿರಾಕಿಗಳು ತುಟಿ ಪಿಟಕ್ ಅನ್ನಲಿಲ್ಲ. ಸಾಲಮನ್ನಾ ಬಗ್ಗೆ ನೋಟ್ ಪ್ರಿಂಟ್ ಮಷಿನ್ ಇಲ್ಲ ಎಂದು ಬಿಎಸ್ವೈ ಹೇಳಿದರು. ಇಂಥವರು ಯಾಕೆ ಹಸಿರು ಶಾಲು ಹಾಕಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ?

Edited By

Hema Latha

Reported By

Madhu shree

Comments