ಮುಂದಿನ ಚುನಾವಣೆಗೆ ಜೆಡಿಎಸ್‍ ಭರ್ಜರಿ ಸಿದ್ಧತೆ

27 Nov 2017 11:02 AM | Politics
494 Report

ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್‍ ಭಾರಿ ಸಿದ್ಧತೆ ನಡೆಸಿದೆ.ಅಂತೆಯೇ ಭಾನುವಾರ ಜೆಡಿಎಸ್‍ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಕೋಲಾರದಲ್ಲಿ ಜೆಡಿಎಸ್‍ ಕಚೇರಿಯನ್ನು ಉದ್ಘಾಟಿಸಿದರು. ಜೊತೆಗೆ ಟೇಕಲ್‍ ರಸ್ತೆಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಹೆಲಿಕ್ಯಾಪ್ಟರ್‍ ಮೂಲಕ ಬೆಂಗಳೂರಿನಿಂದ ಕೋಲಾರಕ್ಕೆ ತೆರಳಿದ ದೇವೇಗೌಡರು ಅಲ್ಲಿ ಕಚೇರಿ ಉದ್ಘಾಟಿಸಿದರು. 2018ರ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯವನ್ನು ಜೆಡಿಎಸ್‍ ಇಲ್ಲಿಂದಲೇ ಆರಂಭಿಸಲು ಕೂಡ ನಿರ್ಧರಿಸಿದೆ ಎನ್ನಲಾಗಿದೆ.

Edited By

Shruthi G

Reported By

Shruthi G

Comments