ಹತ್ತು ದಿನಗಳ ಬೆಳಗಾವಿ ಅಧಿವೇಶನ ಅಂತ್ಯ

25 Nov 2017 11:29 AM | Politics
341 Report

ಈ ಬಾರಿಯ ಅಧಿವೇಶನದಲ್ಲಿ ಸರ್ಕಾರ ಕೆಲ ಮಹತ್ವಾಕಾಂಕ್ಷಿ ವಿಧೇಯಕಯವನ್ನು ಅಂಗೀಕರಿಸಿಕೊಂಡಿದ್ದು ಬಿಟ್ಟರೆ ಮತ್ತಾವುದೇ ಗಮನಾರ್ಹ ಸಂಗತಿಗಳ ಚರ್ಚೆ ನಡೆಯಲಿಲ್ಲ. ಶಾಸಕರ ನಿರುತ್ಸಾಹದ ಸ್ಪಂದನೆ ಹಾಗೂ ಕೆಲವು ಪ್ರಮುಖ ನಿರ್ಣಯಗಳ ಜೊತೆ ಹಲವು ಪ್ರತಿಭಟನೆ, ಧರಣಿಗಳಿಗೆ ಸಾಕ್ಷಿಯಾಗುವ ಮೂಲಕ ಹತ್ತು ದಿನಗಳ ಕಾಲ ನಡೆದ ಬೆಳಗಾವಿ ಅಧಿವೇಶನ ಕೊನೆಗೊಂಡಿತು.

ವೈದ್ಯರ ಮುಷ್ಕರ ಹಾಗೂ ರೋಗಿಗಳ ಸಾವಿನ ಕರಿನೆರಳಲ್ಲಿ ಅಧಿವೇಶ ನಡೆದರೂ ಅಂತಿಮವಾಗಿ ಸಂಧಾನದ ಮೂಲಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ಅಂಗೀಕಾರ ಮಾಡಿಕೊಳ್ಳಲು ಸರ್ಕಾರ ಯಶಸ್ವಿಯಾಯಿತು.ಇದರ ಬೆನ್ನಲ್ಲೇ ಮೌಢ್ಯ ನಿಷೇಝ ಕಾಯ್ದೆದೂ ಉಭಯ ಸದನಗಳು ಒಪ್ಪಿಗೆ ನೀಡಿದವು.ಎರಡೂ ವಿದೇಯಕಗಳು ಮೂಲ ಸ್ವರೂಪ ಕಳೆದುಕೊಂಡು ಹಲ್ಲಿಲ್ಲದ ಹಾವಿನಂತಾಗಿದೆ ಎಂಬ ಆರೋಪ ಬಂದರೂ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಇವೆರಡೂ ವಿಧೇಯಕಗಳು ಕಾರಣವಾದವು.ಅಧಿವೇಶನದ ವೇಳೆ ಪ್ರತಿಪಕ್ಷಗಳ ವಿರುದ್ಧ ಸ್ಪೀಕರ್ ಕೋಳಿವಾಡ ಅವರು ಕಿಡಿಕಾರಿದ್ದರು. ಉತ್ತರ ಕರ್ನಾಟಕ ಜನತೆಯ ಸಂಕಷ್ಟಗಳು ಹಾಗೂ ಸಮಸ್ಯೆಗಳನ್ನು ಚರ್ಚೆಸುವಲ್ಲಿ ಪ್ರತಿಪಕ್ಷಗಳು ವಿಫವಾಗಿದ್ದಕ್ಕೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕ ಜನತೆಯ ಸಂಕಷ್ಟಗಳ ಪರಿಹರಿಸಲು ಸಿಕ್ಕಿದ್ದ ಅವಕಾಶವನನ್ನು ಬಳಸಿಕೊಳ್ಳುವಲ್ಲಿ ಪ್ರತಿಪಕ್ಷಗಳು ವಿಫಲವಾಗಿವೆ ಎಂದು ಹೇಳಿದ್ದಾರೆ. 

 

 
 

 

 

 
 

Edited By

Shruthi G

Reported By

Madhu shree

Comments