ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ನಂತ್ರ ವರಿಷ್ಠರ ಬಗ್ಗೆ ಮಾತಾಡಿ : ಅ. ದೇವೇಗೌಡ ಎಚ್ಚರಿಕೆ

20 Nov 2017 4:15 PM | Politics
157 Report

ಜೆಡಿಎಸ್ ನಿಂದ ಎರಡು ಬಾರಿ ವಿಧಾನಪರಿಷತ್ತಿಗೆ ಸ್ಪರ್ಧೆ ಮಾಡಿ ಸೋತಿದ್ದಾರೆ. ಈ ಬಾರಿ ಶಿವರಾಮೇಗೌಡ ಅವರಿಗೆ ಟಿಕೇಟ್ ನೀಡುವ ಬಗ್ಗೆ ವರಿಷ್ಠರು ಚರ್ಚೆ ಮಾಡುತ್ತಿದ್ದಾರೆ ಇಂತಹ ಸಂದರ್ಭಗಳಲ್ಲಿ ಜೆಡಿಎಸ್ ಪಕ್ಷದಲ್ಲಿ ಟಿಕೇಟ್ ಸಿಗಬೇಕಾದರೆ ಕೋಟಿ ಕೋಟಿ ಹಣ ಕೊಡಬೇಕು ಎಂದು ಅಶೋಕ್ ಹೇಳಿಕೆ ನೀಡಿದ್ದು, ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಅ.ದೇವೇಗೌಡ ಆಗ್ರಹಿಸಿದರು.  

ಬಾಲಕೃಷ್ಣ ಸಹೋದರ ಜಿ.ಪಂ ಸದಸ್ಯ ಅಶೋಕ್ ಮೊದಲು ಜೆಡಿಎಸ್ ಪಕ್ಷಕ್ಕೆ, ಜಿಲ್ಲಾ ಪಂಚಾಯ್ತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಪಕ್ಷವನ್ನು, ಪಕ್ಷದ ವರಿಷ್ಠರನ್ನು ಟೀಕೆ ಮಾಡಲಿ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್ ಒತ್ತಾಯಿಸಿದರು. ಬಾಲಕೃಷ್ಣ ಅವರು ಮೂರು ಬಾರಿ ನಮ್ಮ ಪಕ್ಷದಿಂದ ಶಾಸಕರಾಗಿದ್ದಾರೆ ಅವರು ಸ್ಪರ್ಧೆಗೆ ಎಷ್ಟು ಹಣ ನೀಡಿದರು ಎಂಬುದನ್ನು ಸ್ಪಷ್ಟಪಡಿಸಲಿ, ಅಶೋಕ್ ಅವರು ಜೆಡಿಎಸ್ ಪಕ್ಷದಿಂದ  ಜಿಲ್ಲಾ ಪಂಚಾಯ್ತಿ ಗೆ ಸ್ಪರ್ಧಿಸಲು ಹಣ ನೀಡಿ ಟಿಕೇಟ್ ಪಡೆದರೆ?, ಜೆಡಿಎಸ್ ಪಕ್ಷ ಅವರಿಗೆ ಎಲ್ಲಾ ರೀತಿಯ ಅಧಿಕಾರ ನೀಡಿದ್ದು ಉಂಡ ಮನೆಗೆ ದ್ರೋಹ ಬಗೆಯುವ ಕೆಲಸವನ್ನು ಬಾಲಕೃಷ್ಣ ಮತ್ತು ಅಶೋಕ್ ಮಾಡಿದ್ದಾರೆ ಎಂದು ಟೀಕಿಸಿದರು.
 
ಮೊದಲು ಬಾಲಕೃಷ್ಣ ಸಹೋದರರು ಪಕ್ಷಕ್ಕೆ ಮತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ನಂತರ ಕಾಂಗ್ರೆಸ್ಗೆ ಸೇರ್ಪಡೆಯಾಗಿ ಹೇಳಿಕೆ ನೀಡಲಿ ಇಲ್ಲದಿದ್ದರೆ ಕಾರ್ಯಕರ್ತರೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹೆಚ್.ಸಿ. ರಾಜಣ್ಣ, ಮುಖಂಡರಾದ  ರೈಡ್ ನಾಗರಾಜ್, ಅಜಯ್ ದೇವೇಗೌಡ, ಕುಮಾರ್, ಜಯಕುಮಾರ್, ರಾಮಕೃಷ್ಣಯ್ಯ, ಮಹದೇವ್, ಮತ್ತಿತರರು ಹಾಜರಿದ್ದರು.
 
 
 

Edited By

Hema Latha

Reported By

Madhu shree

Comments