ವಿಧಾನಸಭಾ ಕಲಾಪದಲ್ಲಿ ಎಲ್ಲೆಲ್ಲೂ ಖಾಲಿ ಖಾಲಿ, ಸದಸ್ಯರ ಗೈರು ಎದ್ದು ಕಾಣುತ್ತಿದೆ

20 Nov 2017 1:10 PM | Politics
449 Report

ಹೌದು ಇಂದು ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭಾ ಕಲಾಪದಲ್ಲಿ ಎಲ್ಲೆಲ್ಲೂ ಖಾಲಿ ಖಾಲಿಯಾಗಿತ್ತು. ಸದಸ್ಯರ ಗೈರು ಎದ್ದು ಕಾಣುತ್ತಿತ್ತು. ವಿಧಾನಸಭಾ ಅಧಿವೇಶನದಲ್ಲಿ 17 ಜನರಿರಬೇಕಿದ್ದ ಸದನದಲ್ಲಿ ಇದ್ದದ್ದು ಕೇವಲ 4ಜನ ಸದಸ್ಯರು. ಇದನ್ನು ಕಂಡ ಪ್ರತಿಪಕ್ಷದ ನಾಯಕರು, ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಸ್ಪೀಕರ್ ಕೆ.ಬಿ.ಕೋಳಿವಾಡ ಕೂಡ ಅಸಮಾಧಾನ ವ್ಯಕ್ತಪಡಿಸಿದರು.

 ಕಳೆದ ಆರು ದಿನಗಳಿಂದ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ, ಪ್ರಾರಂಭದಿಂದಲೂ, ಸದಸ್ಯರ ಗೈರು ಹಾಜರಾತಿ ಎದ್ದು ಕಾಣುತ್ತಿದೆ. ಶುಕ್ರವಾರ ಮುಕ್ತಾಯವಾದ ಐದನೇ ದಿನದ ಸದನದ ಬಳಿಕ ಇಂದು ಆರನೇ ದಿನದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇಂದು ವಿಧಾನಸಭೆಯಲ್ಲಿ ಹಾಜರಿದ್ದದ್ದು ಕೇವಲ 4 ಜನ ಸದಸ್ಯರು. ಇಂದಿನ 6ನೇ ದಿನ ಅಧಿವೇಶನಕ್ಕೆ ಆಡಳಿತ ಪಕ್ಷವಾದ ಕಾಂಗ್ರೆಸ್ ನ ಟಿ.ಬಿ.ಜಯಚಂದ್ರ, ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಬಸವರಾಜ ರಾಯರೆಡ್ಡಿ, ಕಾಗೋಡು ತಿಮ್ಮಪ್ಪ ಸೇರಿದಂತೆ ಅನೇಕ ಶಾಸಕರು ಗೈರು ಹಾಜರಾಗಿದ್ದರು. ಹೀಗಾಗಿ 17 ಸದಸ್ಯರು ಇರಬೇಕಿದ್ದ ವಿಧಾನ ಸಭೆಗೆ ಹಾಜರಿದ್ದದ್ದು ಕೇವಲ 4 ಸದಸ್ಯರು. ಈ ಮೂಲಕ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸದನದಲ್ಲಿ ಭಾಗವಹಿಸಿ, ಚರ್ಚಿಸಬೇಕಾದವರೇ ಯಾಕೆ ಇಷ್ಟು ನಿರಾಸಕ್ತಿ ತೋರುತ್ತಿದ್ದಾರೆ ಎನ್ನುವಂತೆ ಸದನ ಗೋಚರಿಸುತ್ತಿತ್ತು.

Edited By

Hema Latha

Reported By

Madhu shree

Comments