ಸಾರ್ವಜನಿಕ ಹಿತಾಸಕ್ತಿಯಷ್ಟೇ, ಪ್ರತಿಷ್ಠೆಯಲ್ಲ: ರಮೇಶ್ ಕುಮಾರ್

16 Nov 2017 4:11 PM | Politics
206 Report

ಸರ್ಕಾರ ಕೆಪಿಎಂಇ ಕಾಯ್ದೆ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿಲ್ಲ. ದುಬಾರಿ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸೇವೆಗಳ ದುಬಾರಿ ದರಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ತಿದ್ದುಪಡಿಗೆ ಮುಂದಾಗಿದ್ದೇವೆ. ಕಾಯ್ದೆ ಜಾರಿಯಲ್ಲಿ ಸರ್ಕಾರಕ್ಕಾಗಲಿ ಅಥವಾ ನನಗಾಗಲಿ ಪ್ರತಿಷ್ಠೆ ಇಲ್ಲ. ಇಂದಿಗೂ ಸರ್ಕಾರ ವೈದ್ಯರೊಂದಿಗೆ ಚರ್ಚೆಗೆ ಸಿದ್ಧವಿದೆ ಎಂದು ರಮೇಶ್ ಕುಮಾರ್ ಹೇಳಿದರು.

ನಾವೆಲ್ಲರೂ ಜನರಿಂದ ಜನರಿಗಾಗಿ ಆಯ್ಕೆಯಾದವರು. ಹೀಗಾಗಿ ಜನರಿಗೆ ಒಳ್ಳೆಯದು ಬೆಕು ಎಂಬುದನ್ನು ಯೋಚಿಸೋಣ.ವೈದ್ಯೋ ನಾರಾಯಣೋ ಹರಿ ಎಂದು ಹೇಳುತ್ತಾರೆ. ವೈದ್ಯ ವೃತ್ತಿ ದೇವರಿಗೆ ಸಮಾನ. ಹೀಗಾಗಿ ಕಾಯ್ದೆ ಸಂಬಂಧ ಮುಕ್ತ ಮನಸ್ಸಿನಿಂದ ಚರ್ಚಿಸೋಣ. ದುಬಾರಿ ದರಗಳ ತಡೆಯುವ ಉದ್ದೇಶದಿಂದಷ್ಟೇ ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದ್ದು, ವೈದ್ಯರನ್ನು ಜೈಲಿಗೆ ಕಳುಹಿಸುವ ಉದ್ದೇಶದಿಂದಲ್ಲ. ಕಾಯ್ದೆ ಜಾರಿ ಬಗ್ಗೆ ಸತ್ಯಾಂಶ ವರದಿಯಾಗುತ್ತಿಲ್ಲ. ಚಿಕಿತ್ಸೆ ವಿಫಲವಾದರೆ ವೈದ್ಯನನ್ನು ಶಿಕ್ಷಿಸುವ ವಿಚಾರ ಶುದ್ಧ ಸುಳ್ಳು. ವೈದ್ಯರನ್ನು ಜೈಲಿಗೆ ಕಳುಹಿಸಲು ಕಾಯ್ದೆ ಜಾರಿ ಮಾಡುತ್ತಿಲ್ಲ. ಸದನದಲ್ಲಿ ಇನ್ನೂ ತಿದ್ದುಪಡಿ ವಿಧೇಯಕ ಮಂಡಿಸಿಲ್ಲ. ಹೀಗಾಗಿ ಸಂಜೆ ಮತ್ತೊಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವೈದ್ಯರೊಂದಿಗೆ ಸಭೆ ನಡೆಸುತ್ತೇವೆ ಎಂದು ರಮೇಶ್ ಕುಮಾರ್ ಹೇಳಿದರು.

Edited By

Shruthi G

Reported By

Madhu shree

Comments