ವೈರಲ್ ಆಯ್ತು ಹಾರ್ದಿಕ್ ಪಟೇಲ್ ರ ಸೆಕ್ಸ್ ಸಿಡಿ..!!

14 Nov 2017 12:05 PM | Politics
785 Report

ಅಶ್ಲೀಲ ವಿಡಿಯೋಗಳು ಇದೀಗ ಗುಜರಾತ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕಳೆದ ಮೇ 26ರಂದು ರೆಕಾರ್ಡ್ ಆಗಿರುವ ಈ ಸಿಡಿಯಲ್ಲಿ ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಮಹಿಳೆಯೊಂದಿಗೆ ಬೆಡ್‍ ರೂಮಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.

10 ದಿನಗಳ ಹಿಂದಷ್ಟೇ ವೈದ್ಯನೋರ್ವನ ಸೆಕ್ಸ್ ಸಿಡಿ ಬಹಿರಂಗವಾಗಿದ್ದಾಗ ಹಾರ್ದಿಕ್ ಪಟೇಲ್, ಇದರಲ್ಲಿ ಅಚ್ಚರಿ ಏನಿಲ್ಲ, ಮುಂದೊಂದು ದಿನ ತಮ್ಮ ಸೆಕ್ಸ್ ವಿಡಿಯೋಗಳನ್ನೂ ಕೂಡ ಬಿಡುಗಡೆ ಮಾಡುತ್ತಾರೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಹಾರ್ದಿಕ್ ಪಟೇಲ್ ಅಸಭ್ಯವಾಗಿ ಕಾಣಿಸಿಕೊಂಡಿರುವ ವಿಡಿಯೋ ಇದೀಗ ಬಿಡುಗಡೆಯಾಗಿದೆ. ಇನ್ನು ಹಾರ್ದಿಕ್ ಮಾತ್ರವಲ್ಲದೇ ಮೀಸಲಾತಿ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ಹಲವರ ಸೆಕ್ಸ್ ಸಿಡಿ ನನ್ನ ಬಳಿ ಇದೆ ಎಂದು ಸಿಡಿ ಬಿಡುಗಡೆ ಮಾಡಿರುವ ಯುವಕ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಈ ವಿಡಿಯೋದಲ್ಲಿರುವುದು ನಾನಲ್ಲ, ಇದು ಬಿಜೆಪಿ ಕುತಂತ್ರ:  ಮಾಧ್ಯಮಗಳಲ್ಲಿ ಸೆಕ್ಸ್ ಸಿಡಿ ಬಿಡುಗಡೆಯಾದ ಬಳಿಕ ಪ್ರತಿಕ್ರಿಯಿಸಿದ ಹಾರ್ದಿಕ್ ಪಟೇಲ್, ಈ ಸಿಡಿಯಲ್ಲಿರುವುದು ನಾನಲ್ಲ, ಅದು ನಕಲಿ ಸಿಡಿ.  ಮೀಸಲಾತಿ ಹೋರಾಟದ ಹೊಡೆತ ತಾಳಲಾರದೇ ಬಿಜೆಪಿಯವರೇ ನಕಲಿ ಸಿಡಿ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಟ್ವಿಟರ್ ನಲ್ಲೂ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಇಂತಹ ನೀಚ ರಾಜಕಾರಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಕಿಡಿಕಾರಿದ್ದಾರೆ.

Edited By

Hema Latha

Reported By

Madhu shree

Comments