ಬೆಟ್ಟಿಂಗ್: ಜೆಡಿಎಸ್ ಬಂಡಾಯ ಶಾಸಕರು ಗೆಲ್ತಾರೋ? ಇಲ್ವೋ?

13 Nov 2017 10:37 AM | Politics
266 Report

ಶ್ರೀನಿವಾಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 4 ಜೆಡಿಎಸ್ ಬಂಡಾಯ ಶಾಸಕರು ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದ್ದರೆ, ಬೋರೇಗೌಡ ಯಾವುದೇ ಕಾರಣಕ್ಕೂ ಬಂಡಾಯ ಶಾಸಕರು ಗೆಲ್ಲುವುದಿಲ್ಲ ಎಂದು ಬೆಟ್ಟಿಂಗ್ ಕಟ್ಟಿದ್ದಾರೆ.

ಈಗಿನಿಂದಲೇ ರಾಮನಗರ ಜಿಲ್ಲೆಯಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಮನಗರ ಜಿಲ್ಲೆ ಮಾಗಡಿಯ ಖಾಸಗಿ ಡಾಬಾವೊಂದರಲ್ಲಿ ಬಂಡಾಯ ಶಾಸಕರ ಬಗ್ಗೆ ಬೆಟ್ಟಿಂಗ್ ನಡೆದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಗಡಿ  ಬಂಡಾಯ ಶಾಸಕ ಎಚ್.ಸಿ ಬಾಲಕೃಷ್ಣ ಬೆಂಬಲಿಗ ಶ್ರೀನಿವಾಸ್ ಮತ್ತು ಜೆಡಿಎಸ್ ಬೆಂಬಲಿಗ ಬೋರೇಗೌಡ ಬೆಟ್ಟಿಂಗ್ ಕಟ್ಟಿಕೊಂಡಿದ್ದಾರೆ. ಇಬ್ಬರು ಸೇರಿ ತಲಾ 40 ಸಾವಿರ ಬೆಟ್ಟಿಂಗ್ ಕಟ್ಟಿಕೊಂಡಿದ್ದಾರೆ. ಅಲ್ಲದೇ ಮಾತುಕತೆ ನಡೆದು ಮಧ್ಯವರ್ತಿ ಒಬ್ಬರು ಹಣವನ್ನು ತನ್ನ ಬಳಿ ಇಟ್ಟುಕೊಳ್ಳುವ ದೃಶ್ಯ ಸೆರೆಯಾಗಿದೆ. ಚುನಾವಣೆಗೆ ಇನ್ನೂ ಸಮಯವಿದ್ದರೂ, ಈಗಲೇ ಬೆಟ್ಟಿಂಗ್ ಶುರುವಾಗಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

Edited By

Hema Latha

Reported By

Madhu shree

Comments