ವಿಧಾನಸಭಾ ಚುನಾವಣೆ : ರಾಜ್ಯದಲ್ಲಂತೂ ಈಗ ಯಾತ್ರೆಗಳ ಪರ್ವ

10 Nov 2017 11:12 AM | Politics
383 Report

ಮೊದಲು ಯಡಿಯೂರಪ್ಪನವರ ಕಮಲದಿಂದ ಪರಿವರ್ತನಾ ಯಾತ್ರೆಯು ಮೊದಲುಗೊಂಡಿದ್ದು, ತದನಂತರದ ಸರದಿಯಲ್ಲಿ ಕುಮಾರಪರ್ವದಲ್ಲಿ ವಿಕಾಸ ಯಾತ್ರೆ ಆರಂಭವಾಗಿದ್ದು ಕೊನೆಯದಾಗಿ ಸಿದ್ದು-ಪರಂರವರ ಕೈ ಆಟದಲ್ಲಿ ಸಾಧನ ಯಾತ್ರೆ ಯಾವಾಗ ಆರಂಭವಾಗತ್ತದೋ ಕಾದು ನೋಡಬೇಕಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಆರೇಳು ತಿಂಗಳು ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ಯಾತ್ರೆಗಳ ಪರ್ವ ಆರಂಭವಾಗಿದೆ. ಕಳೆದುಕೊಂಡಿರುವ ಅಧಿಕಾರವನ್ನು ಹಿಡಿಯಲು ಹವಣಿಸುತ್ತಿರುವ ಬಿಜೆಪಿ ಈಗಾಗಲೇ ಪರಿವರ್ತನಾ ಯಾತ್ರೆ ಆರಂಭಿಸಿದೆ. ಇತ್ತ ಜೆಡಿಎಸ್ ಕೂಡ ವಿಕಾಸಯಾತ್ರೆ ಪ್ರಾರಂಭಿಸಿದ್ದರೆ, ಕಾಂಗ್ರೆಸ್ ಜನಾಶೀರ್ವಾದ ಪಡೆಯಲು ಹೊರಟಿದೆ. ಕರ್ನಾಟಕದಲ್ಲಿ 2018ರ ಮಾರ್ಚ್-ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮತದಾರರ ಮನಸ್ಸು ಗೆಲ್ಲಲು ರಾಜಕೀಯ ಪಕ್ಷಗಳು ಇಂದಿನಿಂದಲೇ ಕಸರತ್ತು ಪ್ರಾರಂಭಿಸಿವೆ. ಅಂದಹಾಗೆ ಭಾರತದ ಇತಿಹಾಸದಲ್ಲಿ ಯಾತ್ರೆಗಳಿಗೆ ತನ್ನದೇ ಆದ ಮಹತ್ವವಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ರಥಯಾತ್ರೆ ಆರಂಭಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ರಾಮ ಜನ್ಮಭೂಮಿ ವಿವಾದವನ್ನು ಮುಂದಿಟ್ಟುಕೊಂಡು 90ರ ದಶಕದಲ್ಲಿ ಬಿಜೆಪಿ ದೇಶಾದ್ಯಂತ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ಯಾತ್ರೆ ಪ್ರಾರಂಭಿಸಿತ್ತು. ಅಂದಿನಿಂದ ಇಂದಿನವರೆಗೂ ರಥಯಾತ್ರೆಗಳು ರಾಜಕೀಯ ವಲಯದಲ್ಲಿ ಭಾರೀ ಮಹತ್ವ ಪಡೆದುಕೊಂಡಿವೆ.

ಯಾತ್ರಾ ರಾಜಕೀಯಕ್ಕೆ ಮುನ್ನುಡಿ ಬರೆದಿದ್ದು ಅವರಲ್ಲ, ಬದಲಾಗಿ ಎನ್.ಟಿ. ರಾಮರಾವ್.ಇಂದಿಗೂ ವಿಶ್ವದಲ್ಲೇ ಒಂದು ಪಕ್ಷ ಸ್ಥಾಪಿಸಿದ ಎಂಬತ್ತು ತಿಂಗಳಲ್ಲಿ ಅಧಿಕಾರ ಪಡೆದ ಉದಾಹರಣೆ ಮತ್ತೊಂದಿಲ್ಲ. ಇದು ಗಿನ್ನಿಸ್ ದಾಖಲೆಯಲ್ಲೂ ಸೇರ್ಪಡೆಯಾಗಿರುವುದು ವಿಶೇಷ. ಜನಸಾಮಾನ್ಯರು ಮೋಕ್ಷಕ್ಕಾಗಿ ಯಾತ್ರೆ (ತೀರ್ಥಯಾತ್ರೆ) ಮಾಡುತ್ತಾರೆ. ಅದೇ ರಾಜಕಾರಣಿಗಳು ಅಧಿಕಾರಕ್ಕಾಗಿ ಯಾತ್ರೆ (ಪ್ರಚಾರ) ಮಾಡುತ್ತಾರೆ. ರಾಜ್ಯದಲ್ಲಂತೂ ಈಗ ಯಾತ್ರೆಗಳ ಪರ್ವ. 

Edited By

Hema Latha

Reported By

Madhu shree

Comments