ನೋಟು ರದ್ದತಿ ಕುರಿತು ಮೋದಿಯನ್ನು ಟೀಕಿಸಿದ ರಾಹುಲ್ ಗಾಂಧಿ

08 Nov 2017 3:15 PM | Politics
241 Report

ನಕಲಿ ನೋಟು ಹಾವಳಿಯನ್ನು ತಪ್ಪಿಸುವಲ್ಲಿ, ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವಲ್ಲಿ ನೋಟು ರದ್ದತಿಯು ವಿಫಲವಾಗಿದೆ. ನೋಟು ರದ್ದತಿಯ ನಂತರ ನಾವು ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ಕಳೆದುಕೊಂಡಿದ್ದೇವೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ

ನೋಟು ರದ್ದತಿ ನಿರ್ಧಾರವು ಆರ್ಥಿಕ ದುರಂತ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ನೋಟು ರದ್ದತಿ ನಿರ್ಧಾರಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, 'ಪ್ರಧಾನಿಯವರ ವಿವೇಚನಾರಹಿತ ನಿರ್ಧಾರದಿಂದ ಜೀವನೋಪಾಯ ಕಳೆದುಕೊಂಡ ಲಕ್ಷಾಂತರ ಪ್ರಾಮಾಣಿಕ ಭಾರತೀಯರ ಜತೆ ನಾವಿದ್ದೇವೆ' ಎಂದು ಹೇಳಿದ್ದಾರೆ.

Edited By

Hema Latha

Reported By

Madhu shree

Comments